ಕಿರುತೆರೆ ಲೋಕದ ಕಲವಿದರ ಒಬ್ಬೊಬ್ಬರೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗೆ ನಟಿ ಮಾನ್ಸಿ ಜೋಶಿ ಮದುವೆಯಾಗಿದ್ದರು. ಇದೀಗ ಕನ್ನಡ ಕಿರುತೆರೆ ಲೋಕದಲ್ಲೇ ವಿಲನ್ ಪಾತ್ರದ ಮೂಲಕ ಸಖತ್ ಫೇಮಸ್ ಆಗಿರುವ ನಟಿ ಮೇಘಶ್ರೀ ಗೌಡ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೊಸ ವರ್ಷದ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡು, ತಾವು ಮದುವೆಯಾಗುತ್ತಿರೋ ಹುಡುಗನ ಫೋಟೋವನ್ನು ರಿವೀಲ್ ಮಾಡಿದ್ದರು. ಆದ್ರೆ ಫೋಟೋದಲ್ಲಿ ಹುಡುಗ ಮುಖವನ್ನು ತೋರಿಸಿಲ್ಲ. ಜೊತೆಗೆ ತಾವು ಮದುವೆ ಆಗುತ್ತಿರೋ ಹುಡುಗ ಯಾರು ಅಂತ ಕೂಡ ರಿವೀಲ್ ಮಾಡಿರಲಿಲ್ಲ. ಇದೀಗ ಕುಂದಾಪುರ ಮೂಲಕ ಪುರಂದರ ಎಂಬ ವ್ಯಕ್ತಿಯ ಜೊತೆ ಮೇಘಶ್ರೀ ಮದುವೆಯಾಗಿದ್ದಾರೆ.
ಇನ್ನೂ, ನಟಿ ಮೇಘಶ್ರೀ ಗೌಡ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ನೂತನ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಬಾಲ ನಟಿಯಾಗಿ ಮಕ್ಕಳ ಡಂಗುರ ಸಿನಿಮಾಗೆ ಎಂಟ್ರಿ ಕೊಟ್ಟ ಮೇಘಶ್ರೀ ಅವರು ಚರಣದಾಸಿ, ಮಯೂರಿ, ಪದ್ಮಾವತಿ, ಮಧುಬಾಲಾ, ಗುಂಡ್ಯಾನ ಹೆಂಡ್ತಿ, ಮೈನಾ, ದೇವತೆ, ಅವನು ಮತ್ತು ಶ್ರಾವಣಿ, ಜಸ್ಟ್ ಮಾತ್ ಮಾತಲ್ಲಿ, ಜೀವನ ಚೈತ್ರಾ, ನಿನ್ನ ಜೊತೆ ನನ್ನ ಕಥೆ, ಸತ್ಯ, ಪುಣ್ಯವತಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.