ಬೆಂಗಳೂರು:- ತೃಪ್ತಿ ಅನ್ನೋದು ಅಧಿಕಾರದಲ್ಲಿ ಇರಲ್ಲ ಎಂದು ಟಿ.ಬಿ ಜಯಚಂದ್ರ ಹೇಳಿದ್ದಾರೆ.
ಮಂಗಳೂರಿನಲ್ಲಿ ಭೀಕರ ಅಪಘಾತ ; ಪಾದಚಾರಿಗಳ ಮೇಲೆ ಹರಿದ ಕಾರು, ಓರ್ವ ಮೃತ್ಯು
ಈ ಸಂಬಂಧ ಮಾತನಾಡಿದ ಅವರು, ಸಚಿವ ಸಂಪುಟ ಪುನರ್ರಚನೆ ಆಗಬೇಕಾ? ಬೇಡ್ವಾ? ಎಂಬುದನ್ನು ವರಿಷ್ಠರು ತೀರ್ಮಾನ ಮಾಡ್ತಾರೆ. ಮಲ್ಲಿಕಾರ್ಜುನ ಖರ್ಗೆಯವರು ಸುದೀರ್ಘ ರಾಜಕಾರಣ ಮಾಡಿಕೊಂಡು ಬರ್ತಿದ್ದಾರೆ. ಅವರು ಇಡುತ್ತಿರೋ ಹೆಜ್ಜೆ ಏನು ಅನ್ನೋದು ಗೊತ್ತಿಲ್ಲ. ನಾನು ಅವರನ್ನು ಭೇಟಿ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.
ನೀರಾವರಿ ಸಚಿವರೊಂದಿಗೆ ಭೇಟಿ ಮಾಡುತ್ತೇವೆ, ಡಿ.ಕೆ ಶಿವಕುಮಾರ್ ಸಹ ಬರ್ತಾರೆ. ಅಧಿಕಾರದಲ್ಲಿ ತೃಪ್ತಿ ಎಲ್ಲಿಯೂ ಇಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೊಟ್ಟಿರೋ ಹುದ್ದೆಯಲ್ಲಿ ಸಾಗುತ್ತಿದ್ದೇವೆ. ಏನಾದರೂ ಖರ್ಗೆಯವರು ಸಂಪುಟ ವಿಸ್ತರಣೆ ಆಗುತ್ತೆ ಅಂದ್ರೆ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ.