ಬೆಂಗಳೂರು/ನವದೆಹಲಿ:- ತಮ್ಮ 119ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದ ಹುಲಿ ವೇಷವನ್ನು ಹಾಡಿ ಹೊಗಳಿದರು.
Hardik Pandya: ಬಾಬರ್ ವಿಕೆಟ್ ಉರುಳಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ಪಾಂಡ್ಯ!
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಹಲವು ವಿಚಾರಗಳನ್ನು ಹಂಚಿಕೊಂಡರು.
ಕರ್ನಾಟಕದ ಹಲವು ವೈಶಿಷ್ಟ್ಯಗಳ ಬಗ್ಗೆ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡುವ ಪ್ರಧಾನಿ ಮೋದಿಯವರು ಈ ಬಾರಿ ರಾಜ್ಯದ ಜನಪದ ಕಲೆಯಾಗಿರುವ “ಹುಲಿ ವೇಷ ಕುಣಿತ”ವನ್ನು ಉಲ್ಲೇಖಿಸುವುದರ ಜೊತೆಗೆ ಹುಲಿ ವೇಷ ಹಾಕುವವರನ್ನೂ ಹಾಡಿ ಹೊಗಳಿದರು. ಚಾಮರಾಜನಗರದ ಬಿಆರ್ಟಿ ಅರಣ್ಯದಲ್ಲಿ ಹುಲಿ ಸಂರಕ್ಷಣೆಯಲ್ಲಿ ಸ್ಥಳೀಯ ಸೋಲಿಗರ ಪಾತ್ರವನ್ನು ಹಾಡಿ ಹೊಗಳಿದರು. ಜೊತೆಗೆ ಆರೋಗ್ಯದ ಬಗ್ಗೆಯೂ ಕೆಲವು ಟಿಪ್ಸ್ ನೀಡಿದ್ದಾರೆ.
ಮುಂದುವರೆದು ಪ್ರಧಾನಿ ಮದಿ ಅವರು, ಇಂದಿನ ತಮ್ಮ ಮನ್ ಕಿ ಬಾತ್ಅನ್ನು ಕ್ರಿಕೆಟ್ ಭಾಷೆಯಲ್ಲಿ ಮಾತನಾಡಿದರು. ಅದರಂತೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕ್ರಿಕೆಟ್ ವಾತಾವರಣವಿದೆ, ಆದರೆ ಭಾರತ ಬಾಹ್ಯಾಕಾಶದಲ್ಲಿ ಶತಕ ಗಳಿಸಿದೆ ಎನ್ನುವುದನ್ನು ಶ್ಲಾಘಿಸಿದರು. ಇಸ್ರೋದ ಈ ಸಾಧನೆಯನ್ನು ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಒಂದು ಸ್ಮರಣೀಯ ಹೆಜ್ಜೆ ಎಂದು ಬಣ್ಣಿಸಿದ ಅವರು, ಇದರೊಂದಿಗೆ ಜನರು ಕನಿಷ್ಠ ಒಂದು ದಿನವಾದರೂ ವಿಜ್ಞಾನಿಗಳಾಗಿ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಕೇಂದ್ರಗಳಿಗೆ ಭೇಟಿ ನೀಡುವಂತೆ ಅವರು ಒತ್ತಾಯಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರನ್ನು ಗೌರವಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿದ್ದಾರೆ. ಆದರಂತೆ ಅವರು ಈ ಬಾರಿಯೂ ಅಂತರರಾಷ್ಟ್ರೀಯ ಮಹಿಳಾ ದಿನದಂದು ಅವರ ಸಾಮಾಜಿಕ ಜಾಲತಾಣದ ಖಾತೆಗಳಾದ ಎಕ್ಸ್ (X), ಇನ್ಸ್ಟಾಗ್ರಾಮ್, ಫೇಸ್ಬುಕ್ ನಂತಹ ಇನ್ನಿತರ ಖಾತೆಗಳನ್ನು ದೇಶದ ಕೆಲವು ಸ್ಪೂರ್ತಿದಾಯಕ ಮಹಿಳಾ ಮಣಿಯರಿಗೆ ಹಸ್ತಾಂತರಿಸುವುದಾಗಿ ತಿಳಿಸಿದರು.