ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಚಾಂಪಿಯನ್ ಟ್ರೋಫಿಯ ಟೂರ್ನಿಯಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಟಾಸ್ ಸೋತಿದ್ದಾರೆ. ಟಾಸ್ ಗೆದ್ದುಕೊಂಡಿರುವ ಪಾಕ್ ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಟಾಸ್ ಸೋತ ಬಳಿಕ ನಾಯಕ ರೋಹಿತ್ ಶರ್ಮಾ ಮಾತನಾಡಿ, ಟಾಸ್ ಗೆಲ್ಲುವುದು, ಸೋಲುವುದು ಮ್ಯಾಟ್ರ ಆಗೋದಿಲ್ಲ. ಅವರು ಟಾಸ್ ಗೆದ್ದಿದ್ದಕ್ಕೆ ನಾವು ಮೊದಲು ಬೌಲಿಂಗ್ ಮಾಡುತ್ತಿದ್ದೇವೆ. ಪಿಚ್ ಮೇಲ್ಮೈ ನಿಧಾನಗತಿ ಇರುವಂತೆ ಕಾಣುತ್ತಿದೆ. ಹೀಗಾಗಿ ಕೊನೆಯ ಮ್ಯಾಚ್ ಆದಂಗೆ ಈ ಪಂದ್ಯ ಆಗಬಹುದು ಎಂದು ಹೇಳಿದ್ದಾರೆ.
ಪಿಚ್ ನಿಧಾನವಾಗಿರುವುದರಿಂದ ಭಾರತ ತಂಡದಲ್ಲಿ ಅನುಭವಿ ಆಟಗಾರರನ್ನು ಅಖಾಡಕ್ಕೆ ಇಳಿಸಲಾಗಿದೆ. ನಾವು ಯಾವ ರೀತಿ ಬ್ಯಾಟಿಂಗ್ ಮಾಡಬೇಕು ಎನ್ನುವುದು ನಮಗೆ ತಿಳಿದಿದೆ. ಟೀಮ್ನಲ್ಲಿ ಎಲ್ಲರ ಪರ್ಫಾಮೆನ್ಸ್ ಇವತ್ತು ಅತ್ಯವಶ್ಯಕವಾಗಿದೆ. ಬೇರೆ ತಂಡದ ವಿರುದ್ಧ ಆಡಿದಂತೆ ಈ ಮ್ಯಾಚ್ನಲ್ಲಿ ಆಡಿದರೆ ಆಗಲ್ಲ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲವೂ ಎಲ್ಲರೂ ಚೆನ್ನಾಗಿ ಮಾಡಬೇಕಿದೆ. ಕೊನೆ ಹಂತದಲ್ಲಿ ಪಂದ್ಯ ಹೇಗಿರುತ್ತದೆ ಎನ್ನವುದು ಎಲ್ಲರ ಕುತೂಹಲವಾಗಿರುತ್ತದೆ. ರೋಚಕ ಹಂತ ತಲುಪಬಹುದು ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.