ಆನೇಕಲ್:- ಬೆಂಕಿ ಅವಘಡ ಸಂಭವಿಸಿ, ಮನೆ ಮುಂಭಾಗ ಕಸದ ರಾಶಿ ಬಳಿ ನಿಲ್ಲಿಸಿದ್ದ ಕಾರು ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಜರುಗಿದೆ. ಮೋಹನ್ ವಿಘ್ನೇಶ್ ಎಂಬುವವರಿಗೆ ಅರ್ಬನ್ ಕ್ರೂಸರ್ ಕಾರು ಸೇರಿದ್ದು, ಮೋಹನ್ ವಿಘ್ನೇಶ್ ಸ್ನೇಹಿತ ಗೌರಿ ಶಂಕರ್ ಕಾರನ್ನ ತೆಗೆದುಕೊಂಡು ಬಂದಿದ್ರು. ನಿನ್ನೇ ಬೆಳಿಗ್ಗೆ ಚೆನೈನಿಂದ ಬೆಂಗಳೂರಿಗೆ ಬಂದಿದ್ರು. ಗೌರಿ ಶಂಕರ್ ಮತ್ತು ಸ್ನೇಹಿತರು ನಿನ್ನೇ ಎಲ್ಲೆಡೆ ಸುತ್ತಾಡಿಕೊಂಡಿದ್ರು. ರಾತ್ರಿ 12 ಗಂಟೆಗೆ ಗೌರಿ ಶಂಕರ್ ಮತ್ತು ಸ್ನೇಹಿತರು ಚಂದಾಪುರಕ್ಕೆ ಬಂದಿದ್ದರು. ಚಂದಾಪುರದ ಸ್ನೇಹಿತನಿದ್ದ ಪಿಜಿ ಬಳಿ ಕಾರನ್ನ ಪಾರ್ಕ್ ಮಾಡಿದ್ರು. ಈ ಕಾರಿನ ಪಕ್ಕದಲ್ಲಿಯೇ ಮತ್ತೊಂದು ಕಾರನ್ನ ಸಹ ಪಾರ್ಕ್ ಮಾಡಲಾಗಿತ್ತು. ನಸುಕಿನ ಜಾವ 3 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ನಡುರಸ್ತೆಯಲ್ಲೇ ಮಹಿಳಾ ಟ್ರಾಫಿಕ್ ಪೊಲೀಸ್ ಪೇದೆಗೆ ಅವಾಜ್: ವ್ಯಕ್ತಿ ವಿರುದ್ಧ ಕೇಸ್ ದಾಖಲು!
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಾರು ಹೊತ್ತಿ ಉರಿದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ತಂಡ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಕಸಕ್ಕೆ ಬೆಂಕಿ ಹಚ್ಚಿದ್ದರಿಂದ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆ ಇದೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.