ಹುಬ್ಬಳ್ಳಿ : ಸಚಿವರ ಬದಲಾವಣೆ ವಿಚಾರ ಕಪೋಲಕಲ್ಪಿತ ಎಂದು ಸಚಿವ ಹೆಚ್ಕೆ ಪಾಟೀಲ್ ಪ್ರತಿಕ್ರಿಯಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಏಳು ಸಚಿವರ ಬದಲಾವಣೆ ಅನವಶ್ಯಕ ಚರ್ಚೆ ಎಂದಿದ್ದಾರೆ.
ಇದೇ ವೇಳೆ ಮುಂದಿನ ಚುನಾವಣೆಯೂ ನನ್ನ ನೇತೃತ್ವದಲ್ಲಿಯೇ ನಡೆಯುತ್ತೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಇವೆಲ್ಲ ಮಾತು ಅನವಶ್ಯಕ, ಇದರ ಬಗ್ಗೆ ಉತ್ತರ ಕೊಡಲ್ಲ. ಈ ಬಾರಿಯ ಬಜೆಟ್ ವಿಚಾರದಲ್ಲಿ ಸಾಕಷ್ಟು ಕಠಿಣ ಪರಿಸ್ಥಿತಿ ಎದುರಿಸತಿದ್ದೇವೆ. ಕೇಂದ್ರದವರು ನಮಗೆ ಕೊಡುವ ಪಾಲನ್ನು ಕೊಡುತ್ತಿಲ್ಲ. ಈ ಬಜೆಟ್ ಅತ್ಯಂತ ಮಹತ್ವದ ಬಜೆಟ್ ಆಗಿದ್ದು, ಸಿದ್ದರಾಮಯ್ಯ ಚಾಣಾಕ್ಷತನದಿಂದ ಬಜೆಟ್ ಮಂಡಿಸುತ್ತಾರೆ. ಎಲ್ಲರಿಗೂ ನ್ಯಾಯ ಕೊಡುಸ್ತಾರೆ ಅನ್ನು ವಿಶ್ವಾಸವಿದೆ ಎಂದರು.