ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿ ಆಗಲಿದ್ದು, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.
ಇನ್ನೂ ಇಂದು ಹೈವೋಲ್ಟೇಜ್ ಪಂದ್ಯ ಇರುವ ಹಿನ್ನೆಲೆ, ಇಂಡಿಯನ್ ಕ್ರಿಕೆಟ್ ಫ್ಯಾನ್ಸ್, ದೇವರ ಮೊರೆ ಹೋಗಿದ್ದಾರೆ. ನಗರದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದು, ಭಾರತ ಗೆಲುವಿಗಾಗಿ ವಿಶೇಷ ಹರಕೆಯ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಲಾಗಿದ್ದು, ವಂದೇ ಮಾತರಂ ಸಂಘಟನೆಯಿಂದ ಪೂಜೆ ಸಲ್ಲಿಕೆ ಮಾಡಲಾಗಿದೆ. 101ತೆಂಗಿನಕಾಯಿ ಹೊಡೆಯುವ ಮೂಲಕ ಗೆಲುವಿಗಾಗಿ ದೇವರಲ್ಲಿ ಪಾರ್ಥನೆ ಮಾಡಿದ್ದಾರೆ.
ಇದೇ ವೇಳೆ ಕ್ರಿಕೆಟ್ ಪ್ರೇಮಿ ಶಿವಕುಮಾರ್ ನಾಯ್ಕ್ ಹೇಳಿಕೆ ನೀಡಿದ್ದು, ಪ್ರತಿ ಮ್ಯಾಚ್ ವೇಳೆಯಲ್ಲೂ ವಿಶೇಷ ಪೂಜೆ ಸಲ್ಲಿಸುತ್ತೇವೆ. ಭಾರತ ತಂಡಕ್ಕೆ ಯಾವುದೇ ದೃಷ್ಟಿ ಬಿದ್ದಿದ್ರು ಹೋಗಬೇಕು ಅಂತ ಪೂಜೆ ಸಲ್ಲಿಸುತ್ತೇವೆ. ಪಾಕಿಸ್ತಾನ ನಮ್ಮ ಬದ್ದವೈರಿ ತಂಡ. ಪಾಕಿಸ್ತಾನವನ್ನ ಭಾರತ ತಂಡ ಸೋಲಿಸಬೇಕು ಅಂತ ಪೂಜೆ ಸಲ್ಲಿಸುತ್ತಿದ್ದೇವೆ. 101 ತೆಂಗಿನಕಾಯಿ, ನಿಂಬೆಹಣ್ಣು ಹೊಡೆಯುವ ಮೂಲಕ ದೇವರಲ್ಲಿ ಪಾರ್ಥಿಸುತ್ತಿದ್ದೇವೆ. ಜೊತೆಗೆ ಆಟಗಾರರಿಗೆ ಹಾಲಿನ ಅಭಿಷೇಕ ಮಾಡಲಾಗುತ್ತಿದೆ
ಇವತ್ತು ಭಾರತ ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.ಚೆನ್ನಾಗಿ ಆಡುವ ಮೂಲಕ ಭಾರತ ತಂಡದ ಗೆಲುವಿಗೆ ಎಲ್ಲರೂ ಕಾರಣರಾಗ್ತಾರೆ ಅನ್ನೋ ನಂಬಿಕೆ ಇದೆ ಎಂದರು.