ತೆಲಂಗಾಣ : ಪ್ರತಿತಂದೆಗೂ ಮಗಳ ಮದುವೆ ಎಂದರೆ ಬಹುದೊಡ್ಡ ಜವಾಬ್ದಾರಿ. ಆ ಜವಾಬ್ದಾರಿಯಲ್ಲಿ ಕೊಂಚವು ಕಾಂಪ್ರಮೈಸ್ ಆಗದೇ ನಿರ್ವಹಿಸುತ್ತಾರೆ. ಒಳ್ಳೆ ಮನೆಗೆ ಮಗಳ ಕೊಟ್ಟು ಮಗಳ ಮದುವೆ ಮಾಡೋದು ಪ್ರತಿ ತಂದೆಯ ಕನಸು ಆಗಿರುತ್ತೆ. ಇದೇ ಕನಸನ್ನು ಸಾಕಾರ ಮಾಡಿದ ಮರುಕ್ಷಣವೇ ತಂದೆಯೊಬ್ಬ ಪ್ರಾಣ ತ್ಯಜಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಚಾಕೊಲೇಟ್ ನೀಡುವ ನೆಪದಲ್ಲಿ ಕಾಮುಕರಿಂದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ.!
ಹೌದು, ತೆಲಂಗಾಣದಲ್ಲಿ ಮಗಳ ಮದುವೆಯಲ್ಲಿ ಖುಷಿ ಖುಷಿಯಿಂದ ಓಡಾಡುತ್ತಿದ್ದ ತಂದೆ ಅದೇ ಕಲ್ಯಾಣ ಮಂಟಪದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಿಕ್ಕನೂರ್ ಮಂಡಲದ ರಾಮೇಶ್ವರಪಲ್ಲಿ ಗ್ರಾಮದ ನಿವಾಸಿ ಬಾಲಚಂದ್ರಂ ಅವರ ಮಗಳ ಮದುವೆ ನಡೆದಿತ್ತು. ಮದುವೆ ಮಂಟಪದಲ್ಲಿ ಸಂತೋಷದಿಂದಲೇ ಓಡಾಟ ನಡೆಸಿದ್ದ ಬಾಲಚಂದ್ರಂ ಇದ್ದಕ್ಕಿದ್ದಂತೆ ಕುಸಿದು ಬಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡಯ್ಯಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.. ಇದಕ್ಕ ಕೇಳಿದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ.. ಕೆಲವೇ ಕ್ಷಣಗಳಲ್ಲಿ ಸಂಭ್ರಮದಿಂದ ತುಂಬಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.