ತುಮಕೂರು : ರಾಜ್ಯ ಕಾಂಗ್ರೆಸ್ನಲ್ಲಿ ಒಂದುಕಡೆ ಪವರ್ ಶೇರಿಂಗ್ ವಿಚಾರ ನಡೀತಿದೆ. ಇನ್ನೊಂದು ಕಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯು ಬಿಸಿಯೇರಿದ. ಇದೆಲ್ಲದರ ನಡುವೆ ತೇಲಿ ಬಂದಿರುವ ಗೃಹ ಸಚಿವರ ರಾಜೀನಾಮೆ ಮಾತು ತೀವ್ರ ಕುತೂಹಲ ಸೃಷ್ಟಿಸಿದೆ.
ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಬಾಯಲ್ಲಿ ರಾಜೀನಾಮೆ ಮಾತು ಕೇಳಿ ಬಂದಿದ್ದು, ಕಾರ್ಯಕರ್ತರೇ ಗೊಂದಲಕ್ಕೀಡಾಗಿದ್ದಾರೆ. ಹೌದು, ತುಮಕೂರಿನ ಕೊರಟಗೆರೆಯ ರಾಜೀವ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಜಿ.ಪರಮೇಶ್ವರ್ ಅವರ ಮಾತು ಅಚ್ಚರಿಯ ಮಾತು ಕೇಳಿಬಂದಿದೆ. ಕಾರ್ಯಕರ್ತರ ಮನದಾಳಕ್ಕೆ ಸ್ಪಂದಿಸಲು ಆಗದಕ್ಕೆ ಬೇಸರ ಹೊರ ಹಾಕಿದ ಹೋಂ ಮಿನಿಸ್ಟರ್ ಜಿ.ಪರಮೇಶ್ವರ್ ರಾಜೀನಾಮೆಯ ಮಾತುಗಳನ್ನಾಡಿದ್ದಾರೆ.
Basawaraj Bommai: ಸಿಎಂ ಸಹನಾ ಶಕ್ತಿ ಕಳೆದುಕೊಂಡಿದ್ದಾರೆ: ಬಸವರಾಜ ಬೊಮ್ಮಾಯಿ!
ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಬೆರೆಯಲು ಆಗುತ್ತಿಲ್ಲ. ನಿಮ್ಮ ಮನಸಿನ ಆಕಾಂಕ್ಷೆಯಂತೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಯಕರ್ತ ಕ್ಷಮೆ ಕೇಳಿದ ಪರಮೇಶ್ವರ್ , ನೀವು ಹೇಳಿದರೆ ಗೃಹ ಸಚಿವ ಸ್ಥಾನ ರಾಜೀನಾಮೆ ನೀಡಲು ಸಿದ್ದ ಎಂದಿದ್ದಾರೆ. ಪರಮೇಶ್ವರ್ ಅವರ ಈ ಹೇಳಿಕೆಯಿಂದ ವಿಚಲಿತರಾದ ಕಾರ್ಯಕರ್ತರು ಹಾಗೂ ಮುಖಂಡರು, ತಕ್ಷಣ ರಾಜೀನಾಮೆ ಕೊಡಬೇಡಿ ಅಂತಾ ಕೂಗಿದ್ದಾರೆ. ಸದ್ಯ ಪರಮೇಶ್ವರ್ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.