ಬೆಳಗಾವಿ:- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯಡಿ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಉತ್ತರಪ್ರದೇಶದಲ್ಲಿ ಬೀದರ್ ಯಾತ್ರಿಕರ ಸಾವು ; ಮೃತರ ಕುಟುಂಬಸ್ಥರ ಭೇಟಿಯಾದ ಸಂಸದ ಸಾಗರ್
ಆದರೂ ಯೋಜನೆ ಜಾರಿಗೂ ಮೊದಲಿನವರೆಗೆ ಉಳಿಸಿಕೊಂಡಿರುವ ಬಾಕಿ ಪಾವತಿ ಮಾಡಲು ಗ್ರಾಹಕರು ಮುಂದಾಗುತ್ತಿಲ್ಲ. ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಾದ ನಂತರ ಗ್ರಾಹಕರು ಸಂಪೂರ್ಣ ಬಾಕಿ ವಿದ್ಯುತ್ ಮೊತ್ತವನ್ನು ಪಾವತಿ ಮಾಡಿಲ್ಲ.
ಇನ್ನೂ ಬಾಕಿ ವಸೂಲಾತಿಗೆ ಹೋದ್ರೆ ಸಿಬ್ಬಂದಿಗಳ ಮೇಲೇಯೇ ಗ್ರಾಹಕರು ಮುಗಿಬೀಳುತ್ತಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಧುಪದಾಳ ಗ್ರಾಮದಲ್ಲಿ ವಿದ್ಯುತ್ ಬಾಕಿ ಬಿಲ್ ಪಾವತಿ ಮಾಡುವಂತೆ ಕೇಳಲು ಹೋದ ಹೆಸ್ಕಾಂ ಸಿಬ್ಬಂದಿಗಳಿಗೆ ಗ್ರಾಹಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಹೆಸ್ಕಾಂ ಸಿಬ್ಬಂದಿಗಳಿಗೆ ಹಲ್ಲೆ ಕೂಡ ಮಾಡಿದ್ದು ನಾವು ವಿದ್ಯುತ್ ಪಾವತಿ ಮಾಡಲ್ಲ ಎಂದು ತಗಾದೆ ತೆಗೆದಿರುವ ಘಟನೆ ಜರುಗಿದೆ.
ಒಟ್ಟಾರೆ ಉಚಿತ ವಿದ್ಯುತ್ ಬಿಲ್ ಸರ್ಕಾರದಿಂದ ಪಾವತಿಯಾಗುತ್ತಿದ್ದು, ಹೆಚ್ಚುವರಿ ಬಳಕೆಯ ವಿದ್ಯುತ್ ಬಿಲ್ ಮಾತ್ರ ಗ್ರಾಹಕರು ಪಾವತಿಸುತ್ತಿದ್ದಾರೆ. ಯೋಜನೆ ಜಾರಿಯಾದ ನಂತರ ಬಾಕಿ ಉಳಿಸಿಕೊಂಡರೆ ವಿದ್ಯುತ್ ಕಡಿತ ಮಾಡಬಹುದಾಗಿದೆ. ಆದರೆ, ಈಗಿನ ಹಣ ಪಾವತಿಸುತ್ತಿದ್ದು, ಹಳೆಯ ಬಾಕಿ ಮಾತ್ರ ಹಾಗೆಯೇ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೊರೆಯಾಗುತ್ತಿದೆ.