ಬೆಂಗಳೂರು: ಮುಡಾದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆದಿದೆ ಅಂತ ಸರ್ಕಾರ ಒಪ್ಪಿಕೊಂಡಿದೆ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆದಿದೆ ಅಂತ ಸರ್ಕಾರ ಒಪ್ಪಿಕೊಂಡಿದೆ.
ಸಿದ್ದರಾಮಯ್ಯ ಕುಟುಂಬದವರು 14 ಸೈಟ್ ವಾಪಸ್ ಕೊಟ್ಟರು. ಜಿಲ್ಲಾಧಿಕಾರಿಗಳು ವರದಿ ಕೊಟ್ಟಿದ್ದಾರೆ. ಇದ್ದವರು ಮೂರು ಜನ, ಕದ್ದವರು ಯಾರು ಎಂದು ಪ್ರಶ್ನಿಸಿದರು. ಲೋಕಾಯುಕ್ತ ತನಿಖೆ ಎಸಿಬಿ ದಾರಿಯಲ್ಲೇ ಇಳಿದಿದೆ. ಕ್ಲೀನ್ಚಿಟ್ ಕೊಟ್ಟಿರೋದು ದುರದೃಷ್ಟಕರ.
ನಿಮಗೆ ಗೊತ್ತೆ..? ಈ ವ್ಯಾಯಾಮಗಳನ್ನ ಮಾಡಿದ್ರೆ ಸಾಕು ಶುಗರ್ ಕಂಟ್ರೋಲ್ಗೆ ಬರುತ್ತಂತೆ..!
ಲೋಕಾಯುಕ್ತದಿಂದ ಸಮಗ್ರ ತನಿಖೆಯಾಗಿಲ್ಲ. ಹಣ ವರ್ಗಾವಣೆ ಆಗಿರೋದನ್ನು ಇ.ಡಿ ಪತ್ತೆ ಹಚ್ಚಿದೆ. ಅಪರಾಧ ನಡೆಸಿದ ಅಪರಾಧಿ ಯಾರು ಎಂಬುದನ್ನು ಲೋಕಾಯುಕ್ತ ಹೇಳಿಲ್ಲ. ಏನು ನಡೆದೇ ಇಲ್ವಾ ಹಾಗಾದ್ರೆ? ಸತ್ಯವನ್ನ ಸಮಾಧಿ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದರು.