ಮೈಸೂರ : ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ.
ಬಂಡೀಪುರದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮಾಸ್ಟರ್ ಪ್ಲ್ಯಾನ್: ಹಸಿರು ಸುಂಕ ವಸೂಲಿಗೆ ಫಾಸ್ಟ್ ಟ್ಯಾಗ್ ಐಡಿಯಾ!
ಇನ್ನು ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಯಾರೋ ಕಿಡಿಗೇಡಿಗಳು ಬೆಟ್ಟಕ್ಕೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬೇಸಿಗೆ ಆರಂಭವಾಗಿರುವುದರಿಂದ ಒಣಗಿದ್ದ ಕಾಡನಿಂದ ಬೀಡಿ ಸಿಗರೇಟಿನ ಕಿಡಿ ಬಿಸಾಡಿರುವುದರಿಂದಲು ಘಟನೆ ಆಗಿರುವ ಶಂಕೆ ಇದೆ. ಸದ್ಯ ಹೊತ್ತಿಕೊಂಡಿರುವ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಮುಂದಾಗಿದ್ದು ಬೆಂಕಿ ಹತೋಟಿಗೆ ಬಂದಿದೆ.
ಚಾಮುಂಡಿ ಬೆಟ್ಟದ ಬಂಡೀಪಾಳ್ಯ ಉತ್ತನಹಳ್ಳಿ ಭಾಗದ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಇದೀಗ ಹರಸಾಹಸಪಟ್ಟು ಬೆಂಕಿ ಸಂಪೂರ್ಣ ನಿಯಂತ್ರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.