ತಾಯಿಯಾಗುವುದು ಮಹಿಳೆಯ ಬಹಳ ದೊಡ್ಡ ಕನಸಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಗು ಹುಟ್ಟಿದಾಗಿನಿಂದ ಜೀವನದ ಕ್ಷಣಗಳನ್ನೂ ಕನಸು ಕಾಣುವುದರಲ್ಲಿ ಕಳೆಯುತ್ತಾಳೆ. ಒಂದು ಹೆಣ್ಣು ಮಗುವು ಮದುವೆಯ ಸಮಯಕ್ಕೆ ಬಂದಾಗ ಆಕೆಯ ಮುಂದಿನ ಕನಸು ಮಗುವಿನದ್ದೇ ಆಗಿರುತ್ತದೆ. ಎಲ್ಲಾ ಮಹಿಳೆಯರಿಗೂ ತಾಯಿಯಾಗುವ ಭಾಗ್ಯ ದೊರೆಯುವುದಿಲ್ಲ, ಕೆಲವೊಂದು ಅನಾರೋಗ್ಯ ಸ್ಥಿತಿಗಳಿಂದ, ಕೆಲವೊಂದು ತಪ್ಪುಗಳಿಂದ ಮಹಿಳೆಯು ತಾಯಿಯಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಆದರೆ, ಇದೊಂದು ದೊಡ್ಡ ಆಘಾತವೇ ಸರಿ.
ಈ ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ: ಶನಿವಾರದ ರಾಶಿ ಭವಿಷ್ಯ 22 ಫೆಬ್ರವರಿ 2025!
ಮಹಿಳೆಯರು ಗರ್ಭಿಣಿಯಾಗಲು ಉತ್ತಮ ಸಮಯ ಸುಮಾರು 28 ವರ್ಷ. ಆದರೆ ಇತ್ತೀಚಿನ ದಿನಗಳಲ್ಲಿ 30ರಿಂದ 35 ವರ್ಷಗಳ ನಡುವಿನ ಸಮಯವನ್ನು ಪ್ರಾಯೋಗಿಕವಾಗಿ ಪರಿಗಣಿಸಲಾಗುತ್ತದೆ. ಗರ್ಭಧಾರಣೆಗಾಗಿ ಮಹಿಳೆಯರಿಗೆ ವಯಸ್ಸು ಬಹಳ ಮುಖ್ಯ. ಸುಮಾರು 28ನೇ ವಯಸ್ಸಿನ ನಂತರ ಮೊಟ್ಟೆಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. 35ರ ನಂತರ ಗರ್ಭಿಣಿಯಾಗಲು ಸಾಧ್ಯವಿದೆ. ಆದ್ರೆ, ಗರ್ಭಧಾರಣೆ ಪ್ರಕ್ರಿಯೆಗೆ ಹೆಚ್ಚು ಕಷ್ಟಕರವಾಗುತ್ತದೆ.
ತಾಯ್ತನಕ್ಕೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಿದ್ಧವಾಗಿರುವಾಗಲೇ ಮಹಿಳೆ ಗರ್ಭಿಣಿಯಾಗಲು ಉತ್ತಮ ಸಮಯವಾಗಿದೆ ಎಂದು ಹಲವು ಅಧ್ಯಯನಗಳು ತೋರಿಸಿವೆ. ಗರ್ಭಧಾರಣೆಗೆ ಅತ್ಯುತ್ತಮ ವಯಸ್ಸು 25ರಿಂದ 35 ವರ್ಷ. ಈ ವಯಸ್ಸಿನಲ್ಲಿ ಮಹಿಳೆಯರ ಫಲವತ್ತತೆ ಅತ್ಯುತ್ತಮವಾಗಿರುತ್ತದೆ. 35 ವರ್ಷಗಳ ನಂತರ ಗರ್ಭಿಣಿಯಾಗಲು ತೊಂದರೆಗಳಾಗುವ ಸಾಧ್ಯತೆ ಹೆಚ್ಚು.
2002ರ ಅಧ್ಯಯನದ ಪ್ರಕಾರ, ಮೊದಲ ಮಗುವಿನ ಜನನಕ್ಕೆ ಸೂಕ್ತವಾದ ವಯಸ್ಸು ಅಂದ್ರೆ, 30.5 ವರ್ಷ ಆಗಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಪ್ರಕಾರ, ಮೊದಲ ಮಗುವಿನ ಜನನಕ್ಕೆ ಸೂಕ್ತವಾದ ವಯಸ್ಸು ಸುಮಾರು 27 ವರ್ಷ. 2016ರ ಅಧ್ಯಯನವು ಅವರ 30ರ ಹರೆಯದ ಮಹಿಳೆಯರು ಅತ್ಯುತ್ತಮ ಫಲವತ್ತತೆ ಹೊಂದಿದ್ದು, 20ರ ಹರೆಯದ ಮಹಿಳೆಯರು ಬಹಳ ಕಡಿಮೆ ಫಲವತ್ತತೆ ಹೊಂದಿದ್ದಾರೆ ಎಂದು ತಿಳಿದಿದೆ.
ಗರ್ಭಿಣಿಯಾಗುವುದು ದೈಹಿಕವಾಗಿ ಪ್ರಯೋಜನಕಾರಿ:ನಿಮ್ಮ 20ರ ವರ್ಷದ ಕೊನೆಯಲ್ಲಿ ಮತ್ತು 30ರ ವರ್ಷದ ಆರಂಭದಲ್ಲಿ ಗರ್ಭಿಣಿಯಾಗುವುದು ದೈಹಿಕವಾಗಿ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸಂಶೋಧನೆಯು ತೋರಿಸಿದೆ. American College of Obstetrics and Gynecology ತಜ್ಞರು ನಡೆಸಿದ 2008ರ ಅಧ್ಯಯನದ ಪ್ರಕಾರ, ಈ ವಯಸ್ಸಿನಲ್ಲಿ ಗರ್ಭ ಧರಿಸುವುದು, ಗರ್ಭಧಾರಣೆಯ ತೊಡಕುಗಳ ಅಪಾಯ ಕಡಿಮೆ ಮಾಡುತ್ತದೆ. ಇಂದಿನ ದಿನಗಳಲ್ಲಿ ಮಹಿಳೆಯರು 30 ವರ್ಷಕ್ಕಿಂತ ಮೊದಲು ಮದುವೆಯಾಗುವುದಿಲ್ಲ. ಆದ್ದರಿಂದ 30 ರಿಂದ 35 ವರ್ಷದೊಳಗಿನ ಮೊದಲ ಮಗು ಹೊಂದುವುದು ಉತ್ತಮ ಹಾಗೂ ಪ್ರಾಯೋಗಿಕ ಮಿತಿಯಾಗಿದೆ ಎಂದು ಡಾ.ನಂದಿತಾ ಪೋಲ್ಶೆಟ್ಕರ್ ತಿಳಿಸುತ್ತಾರೆ.
ತಡವಾದ ತಾಯ್ತನವು ಕೆಲವು ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. 40 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ತಮ್ಮ ಕೊನೆಯ ಮಗುವಿಗೆ ಜನ್ಮ ನೀಡಿದ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು 2012ರ ಅಧ್ಯಯನ ತಿಳಿಸಿದೆ. ವಯಸ್ಸಿನ ಹೊರತಾಗಿ, ಮಗುವನ್ನು ಹೊಂದಲು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಿದ್ಧರಾಗಿರುವಂತಹ ಅನೇಕ ಇತರ ಅಂಶಗಳು ತಾಯಿಯಾಗಲು ಬಹಳ ಮುಖ್ಯವಾಗಿವೆ.