ಬೆಂಗಳೂರು:- ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯ ಡಬಲ್ ರೋಡ್ ರಸ್ತೆಯ ಒಟಿಸಿ ಸರ್ಕಲ್ ಬಳಿ ಮಾನಸಿಕ ಅಸ್ವಸ್ಥನಂತೆ ವರ್ತಿಸಿ ವ್ಯಕ್ತಿಯಿಂದ ಹುಚ್ಚಾಟ ಮೆರೆದಿರುವಂತಹ ಘಟನೆ ಜರುಗಿದೆ.
ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ: ಬಿ ಎನ್ ಜಗದೀಶ್!
ರಾಜು ಮುಂಡಾನಿಂದ ಹುಚ್ಚಾಟ ಮಾಡಲಾಗಿದ್ದು, ಈತ ಜಾರ್ಖಂಡ್ನ ರಾಂಚಿ ಮೂಲದವ. ಎಳನೀರು ಕುಡಿಯುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಬಳಿಕ ಬಿಲ್ಡಿಂಗ್ ಮೇಲೆ ಏರಿ ವಿದ್ಯುತ್ ತಂತಿ ಹಿಡಿದುಕೊಳ್ಳಲು ಯತ್ನಿಸಿದ್ದಾನೆ. ಕೆಳಗೆ ಜಿಗಿಯೋದಾಗಿ ಹೇಳಿ ಕೆಲ ಸಮಯ ಆತಂಕ ಸೃಷ್ಟಿಸಿದ್ದ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದಿದ್ದ ಜಿಗಣಿ ಪೊಲೀಸರು, ಕೂಡಲೇ ಕರೆಂಟ್ ಆಫ್ ಮಾಡಿಸಿದ್ದಾರೆ.