ದಾಸ ಪ್ರತಿ ಹುಟ್ಟುಹಬ್ಬದಲ್ಲೂ ಸಹ ತಮ್ಮ ಅಭಿಮಾನಿಗಳಿಗೆ ಕೇಕ್ ಹಾರ ಗಳ ಬದಲಾಗಿ, ಅಕ್ಕಿ, ಬೇಳೆ ಎಣ್ಣೆ ರೇಷನ್ ತಂದುಕೊಡುವಂತೆ ಹೇಳ್ತಿದ್ರು.. ಅದರಂತೆ ಅಭಿಮಾನಿಗಳು ಕೇಕ್ ಬದಲಾಗಿ ಅಕ್ಕಿ ಬೇಳೆ ಎಣ್ಣೆ ಹೀಗೆ ಆಹಾರ ಪದಾರ್ಥಗಳನ್ನು ತಂದು ದರ್ಶನ್ಗೆ ವಿಶ್ ಮಾಡ್ತಿದ್ರು.. ಆದ್ರೆ ಈ ವರ್ಷ ದರ್ಶನ್ ತಮ್ಮ ಅಭಿಮಾನಿಗಳೊಂದಿಗೆ ಬರ್ತ್ಡ್ ಡೇ ಅಚರಿಸಿಕೊಂಡಿಲ್ಲ. ಆದರೆ ಆದರೂ ಕೂಡ ಅಭಿಮಾನಿಗಳು ತಮ್ಮ ಒಳ್ಳೆ ಕೆಲಸವನನ್ನು ಮಾತ್ರ ತಪ್ಪಿಸಿಲ್ಲ..
ಎಸ್.. ದರ್ಶನ್ಗೆ ನಿರೀಕ್ಷೆಗೂ ಮೀರಿದ ಪ್ರೀತಿ ಸಿಕ್ಕಿದೆ.. ಡೀ ಬಾಸ್ ಹೆಳೋದನ್ನು ಅವರ ಸೆಲಬ್ರಿಟೀಸ್ ಚಾಚು ತಪ್ಪದೇ ಮಾಡ್ತಾರೆ ಅನ್ನೋದಕ್ಕೆ ಅವರ ಈ ವರ್ಷದ ಹುಟ್ಟುಹಬ್ಬವೇ ಸಾಕ್ಷಿ.. ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದ ದರ್ಶನ್ಗೆ ಅಭಿಮಾನಿಗಳು ಭರ್ಜರಿ ಗಿಫ್ಟ್ನ್ನೇ ನೀಡಿದ್ದಾರೆ. ಪುಣ್ಯ ಕಾರ್ಯ ಮಾಡೋ ಮೂಲಕ ಪುಣ್ಯವೆಲ್ಲ ದರ್ಶನ್ಗೆ ಹೋಗುವಂತೆ ಮಾಡಿದ್ದಾರೆ ಫ್ಯಾನ್ಸ್. ತಮ್ಮ ಸೆಲಬ್ರಿಟೀಸ್ಗಳ ಈ ಕೆಲಸಕ್ಕೆ ಅಭಿಮಾನಿದಿಂದ ಧನ್ಯತೆಯಲ್ಲಿ ತೇಲಾಡಿದ್ದಾರೆ ಸುಯೋಧನ
ಈ ವರ್ಷ ನಟ ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕಷ್ಟದಲ್ಲಿದ್ದವರಿಗೆ ಸಹಾಯಸ್ತ ಕೋರಿ ಅವರನ್ನ ಖುಷಿ ಪಡಿಸಿದ್ದಾರೆ. ಸಹಜವಾಗೇ ಇದು ನಟರಿಗೆ ಇದು ಇಷ್ಟ ಆಗುವ ವಿಚಾರ. ಆದರೆ ದರ್ಶನ್ಗೆ ಈ ಬಾರಿ ಭಾರೀ ಸರ್ರ್ಫ್ರೈಸ್ ಆಗಿದೆ. ಹಾಗಂತ ದರ್ಶನ್ ಅಭಿಮಾನಿಗಳು ಕಳೆದ ಅನೇಕ ವರ್ಷಗಳಿಂದ ದರ್ಶನ್ ಹುಟ್ಟುಹಬ್ಬದ ಆಚರಣೆಯನ್ನ ಇಂಥಹ ಪುಣ್ಯ ಕೆಲಸ ಮಾಡ್ತಾನೇ ಆಚರಿಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಎಷ್ಟು ಬೆಂಬಲ ಸಿಗುತ್ತೆ ಅನ್ನೋದೇ ಪ್ರಶ್ನೆಯಾಗಿತ್ತು. ಅದರೆ ಕಳೆದ ಬಾರಿಗಿಂತ ಈ ಬಾರಿ ಜೋರಾಗೇ ಡಿ ಉತ್ಸವ ನಡೆದಿದೆ.
ಅನಾರೋಗ್ಯದ ಕಾರಣ ಕೊಟ್ಟು ದರ್ಶನ್ ಈ ಬಾರಿ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಂಡಿಲ್ಲ. ರಾಜ್ಯದೆಲ್ಲೆಡೆ ಅಭಿಮಾನಿಗಳು ತಮ್ಮ ಹುಟ್ಟುಹಬ್ಬವನ್ನ ಅನಾಥಾಶ್ರಮದಲ್ಲಿ ವೃದ್ಧಾಶ್ರಮದಲ್ಲಿ ಆಸ್ಪತ್ರೆಯಲ್ಲಿ ಹಾಗೂ ಬಡವರ ಜೊತೆ ಆಚರಿಸಿದ ದೃಶ್ಯವನ್ನೆಲ್ಲಾ ದರ್ಶನ್ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ.
ದರ್ಶನ್ ಹುಟ್ಟುಹಬ್ಬವನ್ನ ಅಭಿಮಾನಿಗಳು ಹಠಕ್ಕೆ ಬಿದ್ದವರಂತೆ ಆಚರಣೆ ಮಾಡಿದ್ದು ವಿಶೇಷವೇ ಸರಿ. ರಾಜ್ಯದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಕಡೆ ದಾಸನ ಹುಟ್ಟಿದ ದಿನವನ್ನ ಸಾಮಾಜಿಕ ಸೇವೆ ಮಾಡೋದ್ರ ಮೂಲಕ ಆಚರಿಸಿದ್ದಾರೆ. ಚಿತ್ರದುರ್ಗವೂ ಸೇರಿದಂತೆ ಬೆಂಗಳೂರು ಮೈಸೂರು ದಾವಣಗೆರೆ ಹಾಸನ ಹೀಗೆ ರಾಜ್ಯದ ಅನೇಕ ಕಡೆ ದರ್ಶನ್ ಅಭಿಮಾನಿಗಳು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಅನ್ನಸಂತರ್ಪಣೆ, ಆಹಾರ ಕಿಟ್ ವಿತರಣೆ ಸೇರಿದಂತೆ ಅನೇಕ ಪುಣ್ಯಕಾರ್ಯಗನ್ನ ದರ್ಶನ್ ಹೆಸರಲ್ಲಿ ಮಾಡಿದ್ದಾರೆ
ಈ ಬರ್ತ್ಡೇ ದರ್ಶನ್ಗೆ ಹೊಸ ಹುಟ್ಟು ಕೊಟ್ಟಿದೆ ಅಂದ್ರೂ ತಪ್ಪಾಗಲ್ಲ, ಅಭಿಮಾನಿಗಳ ಪ್ರೀತಿಯಲ್ಲಿ ಕಿಂಚಿತ್ತೂ ಕಮ್ಮಿಯಾಗಿಲ್ಲ ಅನ್ನೋ ಭರವಸೆ ದರ್ಶನ್ಗೆ ಬಂದಿದೆ. ಇದೇ ಕಾರಣಕ್ಕೆ ಹೊಸ ಜೋಶ್ನಲ್ಲಿ ದರ್ಶನ್ ಬಣ್ಣಕ್ಕೆ ರೀ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.