ಕಲಬುರಗಿ : ಕಲಬುರಗಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಮಹಾರಾಷ್ಟ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ಹತ್ಯೆಗೈದು ಶವ ಬಿಸಾಡಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಜ.30ರಂದು ತಾಲೂಕಿನ ಖಜೂರಿ ಗ್ರಾಮದ ರಾಹುಲ್ ಎಂಬಾತ ನಾಪತ್ತೆಯಾಗಿದ್ದನು. ಜ.30ರ ರಾತ್ರಿ 8:30 ಕ್ಕೆ ಮನೆಯಿಂದ ಹೊರ ಹೋಗಿದ್ದ ರಾಹುಲ್ ಬಳಿಕ ಕಣ್ಮರೆಯಾಗಿದ್ದ. ಇದೀಗ 20 ದಿನಗಳ ಬಳಿಕ ಸಾಂಗ್ಲಿ ಬಳಿಯ ಬೆಣ್ಣೆ ತೋರಾದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೂಲಗಳ ಪ್ರಕಾರ ಹಂತಕರು ಕೊಲೆ ಮಾಡಿ ಶವಕ್ಕೆ ಕಲ್ಲು ಕಟ್ಟಿ ಬಿಸಾಕಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕೊಲೆ ಮಾಡಿದ ಐವರ ಪೈಕಿ ಇಬ್ಬರನ್ನ ಪೊಲೀಸರು ಬಂಧಿಸಿದ್ದು ಪ್ರಮುಖ ಆರೋಪಿ ಎಸ್ಕೇಪ್ ಆಗಿದ್ದಾನೆ. ಇನ್ನೊಂದು ವಿಷಯವೆಂದರೆ ಕೊಲೆಯ ಬಳಿಕ ಪ್ರಮುಖ ಆರೋಪಿ ಕುಂಭಮೇಳಕ್ಕೆ ತೆರಳಿ ಎಸ್ಕೇಪ್ ಆಗಿದ್ದಾನಂತೆ. ಯುವತಿಯ ವಿಚಾರದಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.