ಇತ್ತೀಚೆಗೆ ಮೋದಿ ಅಮೆರಿಕಾ ಪ್ರವಾಸ ಕೈಗೊಂಡಿದ್ದು ಈ ವೇಳೆ ಟೆಸ್ಲಾ ಅಧ್ಯಕ್ಷ ಎಲೋನ್ ಮಸ್ಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೀಗ ಭಾರತದಲ್ಲಿ ಟೆಸ್ಲಾ ವಿದ್ಯುತ್ಚಾಲಿತ ಕಾರು ತಯಾರಿಕಾ ಘಟಕ ಸ್ಥಾಪನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪಸ್ವರ ಎತ್ತಿದ್ದು, ‘ಇದು ತುಂಬಾ ಅನ್ಯಾಯ’ ಎಂದಿದ್ದಾರೆ.
ಭಾರತ ವಿಧಿಸುವ ಸುಂಕಗಳನ್ನು ತಪ್ಪಿಸಲು ಭಾರತದಲ್ಲಿ ಟೆಸ್ಲಾ ಘಟಕ ನಿರ್ಮಿಸುವ ಇವಿ ತಯಾರಕರ ಯಾವುದೇ ಸಂಭಾವ್ಯ ಯೋಜನೆಗಳು ‘ತುಂಬಾ ಅನ್ಯಾಯ’ ಎಂದು ಟ್ರಂಪ್ ಹೇಳಿದ್ದಾರೆ.
‘ವಿಶ್ವದ ಎಲ್ಲಾ ರಾಷ್ಟ್ರಗಳೂ ಅಮೆರಿಕದಿಂದ ಪ್ರಯೋಜನ ಪಡೆಯುತ್ತಿವೆ. ಆದರೂ ನಮ್ಮ ಸರಕುಗಳ ಮೇಲೆ ದುಬಾರಿ ಸುಂಕ ವಿಧಿಸಲಾಗುತ್ತಿದೆ. ಭಾರತ ಕೂಡ ಇದರಿಂದ ಹೊರತಾಗಿಲ್ಲ. ಹೆಚ್ಚು ಸುಂಕ ವಿಧಿಸುವ ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪಿಸಿ ಕಾರುಗಳನ್ನು ಮಾರಾಟ ಮಾಡಲು ಸಾಧ್ಯವೇ’ ಎಂದು ಟ್ರಂಪ್ ಫಾಕ್ಸ್ ನ್ಯೂಸ್ಗೆ ಎಲಾನ್ ಮಸ್ಕ್ ಜೊತೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತ ಅತಿಹೆಚ್ಚು ಪ್ರಮಾಣದಲ್ಲಿ ಸುಂಕ ವಿಧಿಸುತ್ತಿದೆ. ಹೀಗಾಗಿ, ನಾವು ಕೂಡ ಪ್ರತಿಯಾಗಿ ಅಷ್ಟೇ ಸುಂಕವನ್ನು ವಿಧಿಸುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ. ಟ್ರಂಪ್ ಮಾತಿಗೆ ‘ಇದು ನ್ಯಾಯಯೋಚಿತ ನಿರ್ಧಾರ’ ಎಂದು ಮಸ್ಕ್ ಪ್ರತಿಕ್ರಿಯಿಸಿದ್ದಾರೆ.