ಒಬ್ಬ ವ್ಯಕ್ತಿ ಹೇಗೆಲ್ಲಾ ತನ್ನ ದೇಶಪ್ರೇಮ ವ್ಯಕ್ತಪಡಿಸುತ್ತಾನೆ ಎಂಬುದನ್ನು ‘ಮಿಷನ್ ಹಿಂದೂಸ್ತಾನ್’ ಪುಸ್ತಕದಲ್ಲಿ ಲೇಖಕಿ ವೇದಶ್ರೀ ಅವರು ವಿವರಿಸಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ರಾಜು ತಿಳಿಸಿದರು.
ಚಿತ್ರಕಲಾ ಪರಿಷತ್ ನಲ್ಲಿ ಸರಸ್ವತಿ ಸಂಪದ ಪ್ರಕಾಶನದಿಂದ ನಡೆದ ಮಿಷನ್ ಹಿಂದೂಸ್ತಾನ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕ ಓದುವುದು ಸುಲಭ, ಆದರೆ ಬರೆಯಲು ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಲವ್ ಸ್ಟೋರಿ ಜೊತೆ ಫಿಕ್ಷನ್ ಸೇರಿಸಿಕೊಂಡು ಬರೆಯುವುದು ಕಷ್ಟ ಅದನ್ನುವರು ಮಾಡಿದ್ದಾರೆ, ಅದರಲ್ಲಿ ದೇಶಪ್ರೇಮ ಸಾರುವ ಕೆಲಸ ಮಾಡಿದ್ದಾರೆ. ಮೊಘಲ್, ಫ್ರೆಂಚ್, ಕಾಶ್ಮೀರ್, ಪುರಾತನ ಕಾಲದ ವೈಭವ, ರಾಜ ಮಹಾರಾಜರ ಕಾಲದ ಸಂಸ್ಕೃತಿಯನ್ನು ಬಳಸಿದ್ದಾರೆ. ಈ ಪುಸ್ತಕದಲ್ಲಿ ಎಲ್ಲವೂ ಇದೆ. ದಯವಿಟ್ಟು ಓದಿ, ಅರ್ಥವಾಗುತ್ತದೆ ಸರಳವಾಗಿದೆ ಎಂದು ಹೇಳಿದರು.
ಪ್ರಸ್ತುತ ಜನರಿಗೆ ಅರ್ಥವಾಗುವ ರೀತಿ ಸರಳವಾಗಿ ಇಂಗ್ಲಿಷ್ ಭಾಷೆಯಲ್ಲಿ ಈ ಪುಸ್ತಕವನ್ನು ಬರೆದಿದ್ದಾರೆ. ಅರ್ಥವಾಗುವ ರೀತಿ ಕಥೆಯನ್ನು ಕೊಂಡೊಯ್ದಿದ್ದಾರೆ. ವೇದ, ಪುರಾಣ, ಇತಿಹಾಸ, ರಾಜ ಮಹಾರಾಜರ ಕಾಲದ ವೈಭವವನ್ನು ತೋರಿಸಿದ್ದಾರೆ. ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಪುಸ್ತಕದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಅದನ್ನು ಓದಿದಾಗ ಮಾತ್ರ ಅರ್ಥವಾಗುತ್ತದೆ. ಎಲ್ಲರೂ ಪುಸ್ತಕವನ್ನು ಓದಿ ಎಂದು ಕಿವಿಮಾತು ಹೇಳಿದರು.
ವೈದ್ಯೆ ಡಾ.ವತ್ಸಲಾ ಕಾಶಿ ಮಾತನಾಡಿ ನಮ್ಮ ವೃತ್ತಿ ಯಾವುದೇ ಇದ್ದರೂ, ಹಿಂದೂ ಧರ್ಮ ಎನ್ನುವುದು ಒಂದು ವಿಶೇಷ, ಪುರಾಣದ ಕಾಲದ ಪ್ರೀತಿ ಹೇಗಿತ್ತು, ಇದೀಗ ಪರಿಸ್ಥಿತಿ ಬೇರೆ ಇದೆ. ಎರಡು ವ್ಯಕ್ತಿಗಳ ಸಂಬಂಧ ಹೀಗೆ ಅಭಿವೃದ್ಧಿಯಾಗುತ್ತದೆ ಎಂಬುದನ್ನು ಪುಸ್ತಕದಲ್ಲಿ ಹೇಳಿದ್ದಾರೆ. ಸಾಮಾಜಿಕ ಜೀವನದಲ್ಲಿ ಎಷ್ಟು ಸಾಮರಸ್ಯ ಇರುತ್ತದೆ. ದೇಶಾಭಿಮಾನ ಉಳಿಸಿಕೊಳ್ಳಕೆಂದರೆ ಇತಿಹಾಸ ಕಲಿಸುತ್ತೇವೆ. ಎಲ್ಲರೂ ಧರ್ಮಾಭಿಮಾನ ಬೆಳೆಸಿಕೊಳ್ಳಲಿ.
ಎಲ್ಲಾ ವಯೋಮಾನದವರು ಪುಸ್ತಕಗಳನ್ನು ಓದಬಹುದು. ಯುವಕರು ಇದೀಗ ಧರ್ಮದ ಬಗ್ಗೆ ಅಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ ಎಂದರು.
ಲೇಖಕಿ ವೇದಶ್ರೀ ಮಾತನಾಡಿ, ಯುವಕರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದಿ ಜ್ಞಾನ ಬೆಳೆಸಿಕೊಳ್ಳಬೇಕು. ಮಕ್ಕಳು ಹೆಚ್ಚಿನ ಜ್ಞಾನ ಪಡೆಯಬೇಕಾದರೆ, ಅವರಲ್ಲಿ ಪುಸ್ತಕಗಳ ಬಗ್ಗೆ ಪ್ರೀತಿ ಬೆಳೆಸಬೇಕು, ಹೀಗಾಗಿ ಮಕ್ಕಳಿಗೆ ಅನುಕೂಲವಾಗಲಿ ಎಂದು 300 ಪುಸ್ತಕಗಳನ್ನು ಕೊಂಡು ಕೊಳ್ಳುವುದಾಗಿ ತಿಳಿಸಿದರು.