ಬೆಂಗಳೂರು:- ಪಾಪಿ ಮಗನೋರ್ವ ತನ್ನ ಚಟಕ್ಕಾಗಿ ಹೆತ್ತ ತಾಯಿಯ ತಾಳಿಯ ಮೇಲೆ ಕಣ್ಣಿಟ್ಟ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ತಾಯಿಯೇ ದೇವರು ಅಂತಾ ಪೂಜೆ ಮಾಡೋದು ಬಿಟ್ಟು ಎಣ್ಣೆಗಾಗಿ ತಾಯಿಗೆ ಚಾಕು ಇರಿದು ಈ ಪಾಪಿ ಕೃತ್ಯ ಎಸಗಿದ್ದಾನೆ.
ಬೆಟ್ಟಿಂಗ್ ಆಪ್ ಗಳ ವಿರುದ್ಧ ಕರವೇ ಆಕ್ರೋಶ: ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ!
ಮಹೇಶ್ ಅಲಿಯಾಸ್ ಕಲರ್ಸ್ ಹೆತ್ತ ತಾಯಿ ಜಯಲಕ್ಷ್ಮಿಗೆ ಚಾಕು ಇರಿದ ಪಾಪಿ ಮಗ ಎನ್ನಲಾಗಿದೆ. ಕುಡಿತದ ಚಟಕ್ಕೆ ಆರೋಪಿ ರಾಹುಲ್ @ ಕಲರ್ಸ್ ದಾಸನಾಗಿದ್ದ. ಮಗ ಪೋಲಿಗೆ ಬಿದ್ದಿದ್ರೂ ಆಗಾಗ ಖರ್ಚಿಗೆ ತಾಯಿ ಹಣ ಕೊಡ್ತಿದ್ದರು. ಕೂಲಿಕೆಲಸ ಮಾಡಿ ಮಗನ ಖರ್ಚಿಗೆ ತಾಯಿ ಹಣ ಕೊಡ್ತಿದ್ದರು. ಆದರೆ ಕಳೆದ ಎರಡು ಮೂರು ದಿನಗಳಿಂದ ಖರ್ಚಿಗೆ ದುಡ್ಡು ಕೊಟ್ಟಿರಲಿಲ್ಲ. ಕುಡಿಯೋಕೆ ಹಣ ಕೊಡು ಅಂತಾ ಆರೋಪಿ ರಾಹುಲ್ @ ಕಲರ್ಸ್ ಪೀಡಿಸಿದ್ದ. ಆದ್ರೆ ಹಣ ಇರದೆ ಕೊಡೋಕೆ ಆಗ್ತಿರಲಿಲ್ಲ. ಹೀಗಾಗಿ ಹಣ ಇಲ್ಲ ಎಂದಿದ್ದ ತಾಯಿ ಜಯಲಕ್ಷ್ಮಿ ತಾಳಿ ಕೊಡು ಎಂದು ಗಲಾಟೆ ತೆಗೆದಿದ್ದ. ಗಲಾಟೆ ವೇಳೆ ತಾಯಿಗೆ ಚಾಕು ಇರಿದು ತಾಳಿ ಕಿತ್ಕೊಂಡು ಮಗ ಎಸ್ಕೇಪ್ ಆಗಿದ್ದ. ನಂತರ ಆಕೆಯನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಸಂಬಂಧ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆ ಯತ್ನ ಪ್ರಕರಣದ ಅಡಿ ಆರೋಪಿಯನ್ನ ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.
ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.