ಬೆಂಗಳೂರು: ಮುಡಾ ಕೇಸ್ನಲ್ಲಿ ಸತ್ಯ ಇಲ್ಲ ಎಂದು ನಮಗೆ ಗೊತ್ತಿದ್ದ ವಿಷಯ.ಇದರಲ್ಲಿ ಸಿಎಂ ಯಾವುದೇ ಪ್ರಭಾವ ಬೀರಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಡಾ ಕೇಸ್ನಲ್ಲಿ ಸತ್ಯ ಇಲ್ಲ ಎಂದು ನಮಗೆ ಗೊತ್ತಿದ್ದ ವಿಷಯ.
ಇದರಲ್ಲಿ ಸಿಎಂ ಯಾವುದೇ ಪ್ರಭಾವ ಬೀರಿಲ್ಲ. ಯಾವುದೇ ಲೆಟರ್ ಬರೆದಿರಲಿಲ್ಲ. ಬದಲಿ ನಿವೇಶನ ಎಲ್ಲರಿಗೂ ಕೊಡ್ತಾರೆ. ಅದರಂತೆ ಸಿಎಂ ಪತ್ನಿಗೂ ಕೊಟ್ಟಿದ್ದಾರೆ. ಈ ತಪ್ಪು ಆಗಿರೋದು ಬಿಜೆಪಿ ಅವಧಿಯಲ್ಲಿ. ಏನಾದರೂ ಕ್ರಮ ಆಗೋದಿದ್ದರೆ ಅವರ ಮೇಲೆ ಕ್ರಮ ಆಗಬೇಕು ಎಂದಿದ್ದಾರೆ.
Turmeric Milk: ಈ ಸಮಸ್ಯೆಗಳಿದ್ದರೆ ತಪ್ಪಿಯೂ ಅರಿಶಿನ ಮಿಶ್ರಿತ ಹಾಲನ್ನು ಕುಡಿಯಬೇಡಿ!
ಸಿದ್ದರಾಮಯ್ಯ ಅವರದ್ದು ಏನೇ ತಪ್ಪು ಇಲ್ಲದೇ ಹೋದರು ಪಾದಯಾತ್ರೆ ಮಾಡಿದ್ರು. ಈಗ ಕ್ಲೀನ್ಚಿಟ್ ಸಿಕ್ಕಿದೆ. ಇದರ ಹೊಣೆ ಈಗ ಬಿಜೆಪಿ-ಜೆಡಿಎಸ್ನವರು ಹೊರಬೇಕು. ಸಿಬಿಐ ತನಿಖೆ ಬೇಡ ಎಂದು ಕೋರ್ಟ್ ಹೇಳಿತ್ತು. ಲೋಕಾಯುಕ್ತಗೆ ವರದಿ ಕೊಟ್ಟಿದೆ. ಬಿಜೆಪಿ ಅವರಿಗೆ ನ್ಯಾಯಾಲಯದ ಮೇಲೆ ಗೌರವ ಇಲ್ಲ ಅಂದರೆ ನಾವೇನು ಮಾಡೋಣ? ಬಿಜೆಪಿಯವರು ಮಂಡು ಬಿದ್ದಿದ್ದಾರೆ ಎಂದು ಹೇಳಬೇಕು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.