ಬೆಳಗಾವಿ : ಹಿಂಡಲಗಾ ಜೈಲಿನಲ್ಲಿ ಜಾಮರ್ ಅಳವಡಿಕೆಯಿಂದಾಗಿ ಜೈಲಿನ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಇದೀಗ ಸಮಸ್ಯೆಯುಂಟಾಗುತ್ತಿದೆ. ಜಾಮರ್ ಅಳವಡಿಕೆಯಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಆರಂಭವಾಗಿದೆ. ಹಿಂಡಲಗಾ ಗ್ರಾಮ, ವಿಜಯನಗರ, ಗಣೇಶಪುರ, ಬೆನಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನ ವಸತಿ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿದ್ದು, ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರದಾಡುವಂತಾಗಿದೆ. ಗ್ರಾಮ ಪಂಚಾಯತಿ, ಸರ್ಕಾರಿ ಕಚೇರಿಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಪದೇ ಪದೇ ಸರ್ವರ್ ಡೌನ್ ಆಗುತ್ತಿದ್ದು, ಜಾಮರ್ ಪ್ರೀಕ್ವೇನ್ಸಿ ಕಡಿಮೆ ಮಾಡಲು ಹಿಂಡಲಗಾ ಗ್ರಾಮ ಪಂಚಾಯತಿಯಿಂದ ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಜೈಲಿನ ಕೈದಿಗಳು ಮೊಬೈಲ್ ಬಳಕೆಗೆ ಬ್ರೇಕ್ ಹಾಕಲು ಜಾಮರ್ ಅಳವಡಿಕೆ ಮಾಡಲಾಗಿದೆ. ಇದೇ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಹೋಗಿತ್ತು. ಹಿಂಡಲಗಾ ಜೈಲಿನಲ್ಲಿ ದುಡ್ಡುಕೊಟ್ಟರೆ ಎಲ್ಲವೂ ಸಿಗುತ್ತೆ ಅನ್ನೋದನ್ನ ಕೈದಿಗಳೇ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಬೆಳಕಿಗೆ ತಂದಿದ್ದರು. ಹೀಗಾಗಿ ಕೈದಿಗಳು ಜೈಲಿನಲ್ಲಿ ಮೊಬೈಲ್ ಬಳಕೆ ಬ್ರೇಕ್ ಹಾಕಲು ಜೈಲಾಧಿಕಾರಿಗಳಿಂದ ಜಾಮರ್ ಅಳವಡಿಕೆ ಮಾಡಲಾಗಿದೆ.
ಅಂಗನವಾಡಿ ಆಹಾರ ವಿತರಣೆಯಲ್ಲಿ ಅಕ್ರಮ : ಡಿಡಿ, ಸಿಡಿಪಿಓ, ಪಿಓ ಯೋಜನಾಧಿಕಾರಿ ಅಮಾನತು
ಕಳೆದ ನಾಲ್ಕೈದು ವರ್ಷದಿಂದ ಜೈಲಿನಲ್ಲಿದ್ದ 2 ಜಿ ಜಾಮರ್ ಕೆಟ್ಟು ಹೋಗಿತ್ತು. ಈಗ ಟೆಕ್ನಾಲಜಿ ಅಪ್ಡೇಟ್ ಮಾಡಿ 5 ಜಿ ಜಾಮರ್ ಅಳವಡಿಕ ಮಾಡಿದ್ದು, ಇದರಿಂದಾಗಿ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದ್ದು, ಜಾಮರ್ ಫ್ರೀಕ್ವೆನ್ಸಿ ಕಡಿಮೆ ಮಾಡದಿದ್ದರೆ ಬೀದಿ ಹೋರಾಟ ಮಾಡುವುದಾಗಿ ಜೈಲಾಧಿಕಾರಿಗಳಿಗೆ ಜನರು ಎಚ್ಚರಿಕೆ ನೀಡಿದ್ದಾರೆ.