ಏರ್ಟೆಲ್ನ ರೀಚಾರ್ಜ್ ದರಗಳು ಗರಿಷ್ಠ ಎನಿಸಿದರೂ ಅದರ ನೆಟ್ವರ್ಕ್ ಸರ್ವಿಸ್ ಉತ್ಕೃಷ್ಟವಾಗಿರುತ್ತದೆ. ಅದರ ವಿವಿಧ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ಗಳ ದರಗಳನ್ನು ಕಳೆದ ತಿಂಗಳು ಹೆಚ್ಚಿಸಲಾಗಿದೆ. ಬಹುತೇಕ ಎಲ್ಲಾ ಪ್ಲಾನ್ಗಳ ಬೆಲೆ ಏರಿಕೆ ಮಾಡಲಾಗಿದೆ. ಏರ್ಟೆಲ್ನ ರೀಚಾರ್ಜ್ ಪ್ಲಾನ್ಗಳು ತುಸು ದುಬಾರಿ ಎನಿಸಿದರೂ ವಿವಿಧ ಒಟಿಟಿಗಳ ಸಬ್ಸ್ಕ್ರಿಪ್ಷನ್ ಅನ್ನು ಉಚಿತವಾಗಿ ಕೊಡುತ್ತವೆ.
ಹೆಣ್ಣು ಮಕ್ಕಳೇ ತುಂಬಿರುವ ಮನೆಯಲ್ಲಿ ಮಗ ಇಲ್ಲದಿದ್ದರೆ ತಂದೆ ಚಿತೆಗೆ ಬೆಂಕಿ ಇಡುವವರು ಯಾರು? ಧರ್ಮ ಹೇಳುವುದೇನು?
ಅದರಂತೆ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾದ ಏರ್ಟೆಲ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಭಾರತದಲ್ಲಿ ಗ್ರಾಹಕರ ನಂಬಿಕೆಗೆ ಅರ್ಹವಾದ ಸಿಮ್ಗಳಲ್ಲಿ ಕೆಲವೇ ಕೆಲವು ಆಯ್ಕೆಗಳಿರುವುದರಿಂದ ಬಹುತೇಕರು ಏರ್ಟೆಲ್ ನೆಟ್ವರ್ಕ್ಅನ್ನೇ ಬಳಸುತ್ತಿದ್ದಾರೆ.
ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ದರ ಏರಿಕೆ ಸಮಾನ್ಯ. ಆದರೆ ಇತ್ತೀಚಿಗೆ ಏರ್ಟೆಲ್ ರೀಚಾರ್ಜ್ ಬೆಲೆಯನ್ನು ಏಕಾಏಕಿ ಹೆಚ್ಚಿಸಲಾಗಿತ್ತು. ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಹಾಗೂ ನೆಟ್ವರ್ಕ್ ಅತ್ಯಗತ್ಯವಾದ ಕಾರಣ ಜನ ರೀಚಾರ್ಜ್ ಬೆಲೆ ಏರಿಕೆಯನ್ನು ಹೆಚ್ಚಾಗಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬದಲಿಗೆ ತಿಂಗಳ ರೀಚಾರ್ಜ್ ಖಾಲಿಯಾಗುತ್ತಿದ್ದಂತೆ ಹೊಸ ರೀಚಾರ್ಜ್ ಮಾಡಿಯೇ ಮಾಡುತ್ತಾರೆ.
ಇತ್ತೀಚಿಗಷ್ಟೇ ದರ ಏರಿಕೆ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದ ಏರ್ಟೆಲ್ ಇದೀಗ ತಮ್ಮ ಗ್ರಾಹಕರಿಗಾಗಿ ಸಿಹಿ ಸುದ್ದಿಯನ್ನು ನೀಡಿದ್ದು, ಏರ್ಟೆಲ್ ತನ್ನ ಗ್ರಾಹಕರಿಗೆ ಜಾಕ್ ಪಾಟ್ ಆಫರ್ ನೀಡಿದೆ. ಅಗ್ಗದ ಬೆಲೆಯಲ್ಲಿ ದೀರ್ಘಾವಧಿಯ ಯೋಜನೆಯನ್ನು ಏರ್ಟೆಲ್ ಗ್ರಾಹಕರಿಕೆ ನೀಡುತ್ತಿದ್ದು, ಏರ್ಟೆಲ್ ಬಳಕೆದಾರರು ಈ ಆಫರ್ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಏರ್ಟೆಲ್ ಗ್ರಾಹಕರಿಗೆ ನೀಡಿರುವ ಹೊಸ ಆಫರ್ ವಿವರ ಇಲ್ಲಿದೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಸೂಚನೆಯಂತೆ ಏರ್ಟೆಲ್ ಇತ್ತೀಚಿಗೆ ಅಗ್ಗದ ಬೆಲೆಯ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಆಫರ್ ಮೂಲಕ ಏರ್ಟೆಲ್ 84 ದಿನಗಳ ದೀರ್ಘಾವಧಿ ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸಿದೆ. ಕೇವಲ 469 ರೂಪಾಯಿಗೆ 84 ದಿನಗಳ ದೀರ್ಘಾವಧಿ ಸೇವೆ ಸಿಗಲಿದೆ.
ಏರ್ಟೆಲ್ನ ಈ ಹೊಸ ರಿಚಾರ್ಜ್ ಯೋಜನೆಯಯಲ್ಲಿ ಒಟ್ಟು 900 ಉಚಿತ ಎಸ್ಎಮ್ಎಸ್ ಸೌಲಭ್ಯ ಇರಲಿದ್ದು, ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಸಂಪೂರ್ಣವಾಗಿ ಉಚಿತವಾಗಿರಲಿದೆ. ಈ ಯೋಜನೆಯಲ್ಲಿ ಏರ್ಟೆಲ್ ಇಂಟರ್ನೆಟ್ ಸೌಲಭ್ಯದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಈ ಪ್ಲಾನ್ನಲ್ಲಿ ರಿಚಾರ್ಜ್ ಮಾಡುವ ಗ್ರಾಹಕರಿಗೆ ಉಚಿತ ಹೆಲೋಟ್ಯೂನ್ ಸೇವೆ ಸಹ ಸಿಗಲಿದೆ. ಇದು ದೀರ್ಘಾವಧಿಯ ಯೋಜನೆಯಾಗಿರುವುದರಿಂದ ಕರೆ ಹಾಗೂ ಎಸ್ಎಮ್ಎಸ್ ಸೌಲಭ್ಯ ಬಳಸುವ ಗ್ರಾಹಕರಿಗೆ ಇದು ಬಜೆಟ್ ಫ್ರೆಂಡ್ಲಿ ಯೋಜನೆಯಾಗಿದೆ.