ಕಲಬುರಗಿ : ಸಿಮೆಂಟ್ ಫ್ಯಾಕ್ಟರಿ ಅವಾಂತರಕ್ಕೆ ಮತ್ತೊಬ್ಬ ಯುವಕನ ಜೀವ ಬಲಿಯಾಗಿದೆ. ಕಲಬುರಗಿ ಜಿಲ್ಲೆಯ ಸೇಡಂನ ವಾಸವದತ್ತಾ ಫ್ಯಾಕ್ಟರಿ ಗೂಡ್ಸ್ ರೈಲು ಸಂಚರಿಸ್ತಿದ್ದ ಹಿನ್ನಲೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಫ್ಯಾಕ್ಟರಿ ಗೂಡ್ಸ್ ರೈಲು ಪಾಸ್ ಆಗುವವರೆಗೂ ರಸ್ತೆಯಲ್ಲಿ ಆ್ಯಂಬುಲೆನ್ಸ್ ಕಾದು ನಿಲ್ಲೇಬೇಕಾಗಿತ್ತು. ಹೀಗಾಗಿ ಸೇಡಂನಿಂದ ಕಲಬುರಗಿಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ಯುವಕ ಸಾವು ಆ್ಯಂಬುಲೆನ್ಸ್ನಲ್ಲಿ ಸಾವನ್ನಪ್ಪಿದ್ದಾನೆ.
ಸೇಡಂ ಪಟ್ಟಣದ ನಿವಾಸಿ ಮುಕ್ತಾರ ಎಂಬಾತ ನಿನ್ನೆ ರಾತ್ರಿ ಕ್ರಿಕೆಟ್ ಆಡುವಾಗ ಫಿಡ್ಸ್ ಬಂದು ಬಳಿಕ ಹೃದಯಾಘಾತಕ್ಕೆ ಒಳಗಾಗಿದ್ದ. ಆತನನ್ನೂ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕೊಂಡೊಯ್ಯಲು ಸೂಚನೆ ನೀಡಲಾಗಿತ್ತು. ಸೇಡಂನಿಂದ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆತರುವಾಗ ಘಟನೆ ನಡೆದಿದೆ.
ಲವ್ ಮಾಡಿ ಮದುವೆ ಆಗಿದ್ದ ಹೆಂಡ್ತಿ ಸ್ನೇಹಿತನ ಜೊತೆ ಎಸ್ಕೇಪ್: ಮನನೊಂದ ಗಂಡ ಸೂಸೈಡ್!
ಗೂಡ್ಸ್ ವಾಹನ ನಿಲ್ಲಿಸಿದರಿಂದಲೇ ಮುಕ್ತಾರ್ ಸಾವಾಗಿದೆ ಎಂದು ಆರೋಪಿಸಿದ ಮುಕ್ತಾರ ಸಂಬಂಧಿಕರು ಫ್ಯಾಕ್ಟರಿ ಮುಂಭಾಗ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ. ವಾಸವದತ್ತಾ ಫ್ಯಾಕ್ಟರಿ ರೈಲು ಹಳಿ ಸ್ಥಾಳಂತರಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿದ್ದು, ಹಳಿ ಸ್ಥಳಾಂತರ ಮಾಡಿ ಇಲ್ಲಾ ರೈಲು ಸಮಯ ಬದಲಾವಣೆ ಮಾಡುವಂತೆ ಅನೇಕ ಬಾರಿ ಹೋರಾಟ ಮಾಡಿದ್ರೂ ಕೂಡ ಪ್ರಯೋಜವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.