ಬೇಸಿಗೆಯ ಬಿಸಿಲಿಗೆ ತಂಪಾಗಿರುವ ಆಹಾರವನ್ನು ನಾವು ಹೆಚ್ಚಾಗಿ ತಿನ್ನಲು ಬಯಸುತ್ತೇವೆ. ದೇಹವನ್ನು ತಂಪಾಗಿಸಲು ಅನೇಕ ಪಾನಿಯಗಳ ಮೋರೆ ಹೋಗುತ್ತೇವೆ. ವೀಕೆಂಡ್ನಲ್ಲಿ ಏನು ಸಾರು ಮಾಡುವುದು ಎಂದು ಯೋಚಿಸುವ ನೀವು ಮಜ್ಜಿಗೆ ಸಾರು ಮಾಡಿ ಒಂದೆರಡು ತುತ್ತು ಊಟ ಜಾಸ್ತಿ ಸೇರುತ್ತೆ. ಸುಲಭವಾಗಿ ಮಾಡುವ ರುಚಿಯಾದ ಮಜ್ಜಿಗೆ ಸಾರು ಮಾಡುವ ವಿಧಾನ.
ಲವ್ ಮಾಡಿ ಮದುವೆ ಆಗಿದ್ದ ಹೆಂಡ್ತಿ ಸ್ನೇಹಿತನ ಜೊತೆ ಎಸ್ಕೇಪ್: ಮನನೊಂದ ಗಂಡ ಸೂಸೈಡ್!
ಬೇಸಿಗೆ ಶುರುವಾಗಿದೆ. 9 ಗಂಟೆ ಆಗ್ತಿದ್ದಂತೆ ಅಬ್ಬಾ ಬಿಸಿಲು ಅಂತ ಜನ ಸುಸ್ತಾಗುವಂತಾಗಿದೆ. ಹೀಗಿರುವಾಗ ನಿಮ್ಮ ಊಟದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳೋದು ನಿಮ್ಮ ದೇಹ ತಂಪಾಗಿರೋಕೆ ನೆರವಾಗುತ್ತದೆ. ಅದಕ್ಕಾಗಿ ಏನ್ ಮಾಡ್ಬೇಕು?
ಗೋಬಿ ಚಿಲ್ಲಿ, ಚಿಕನ್ ಮಸಾಲೆ, ಸ್ಫೈಸಿ ಸ್ಯಾಂಡ್ವಿಚ್, ಖಾರ ಚಟ್ನಿ ಜೊತೆಗಿನ ಮೊಮೊಸ್ ಇಂತಹ ಆಹಾರಗಳೆಲ್ಲ ನಿಮ್ಮ ಫೇವರಿಟ್ ಲಿಸ್ಟ್ನಲ್ಲಿರಬಹುದು. ಆದರೆ ಮುಂದಿನ ಮೂರು ನಾಲ್ಕು ತಿಂಗಳು ಇದನ್ನು ಅವಾಯ್ಡ್ ಮಾಡಿದಷ್ಟು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.
ಸಾಂಬಾರು ಪುಡಿ ಹಾಕಿ ಸ್ಪೈಸಿ ಹಾಗೂ ಥಿಕ್ ಆಗಿರುವ ಸಾಂಬಾರು, ಖಾರದ ರಸಂ ಸ್ವಲ್ಪ ಕಡಿಮೆ ಮಾಡಿ ಬಾಯಿಗೆ ರುಚಿ, ಹೊಟ್ಟೆಗೆ ಹಿತ ಎನಿಸುವಂತಹ ಈ ರೆಸಿಪಿ ಟ್ರೈ ಮಾಡಿ ನೋಡಿ. ನೀವು ಕಳೆದೇ ಹೋಗ್ತೀರಿ. ಅಷ್ಟೇ ಅಲ್ಲದೆ ನಿಮ್ಮ ದೇಹ ತಂಪಾಗಿರುತ್ತೆ.
ಬೇಸಿಗೆ ಬರ್ತಿದ್ದಂತೆ ನಿಂಬೆ ಜ್ಯೂಸ್, ಕಲ್ಲಂಗಡಿ, ಮಜ್ಜಿಗೆ, ಎಳನೀರಿಗೆ ಭಾರೀ ಡಿಮ್ಯಾಂಡ್. ಮಜ್ಜಿಗೆ ಹುಳಿಯಾಗಿದೆ, ತಂಪಾದ್ರೂ ಹುಳಿ ಮಜ್ಜಿಗೆ ಕುಡಿಯೋದು ಹೇಗೆ ಅಂತೀರಾ? ಮಜ್ಜಿಗೆ ಬಿಡಿ, ಮಜ್ಜಿಗೆ ಸಾರು ಮಾಡ್ಕೊಳ್ಳಿ.
ನಿಮ್ಮ ಅಡುಗೆ ಸಮಯ ಉಳಿಯುತ್ತೆ. ದೇಹಾನೂ ತಂಪಾಗಿರುತ್ತೆ. ಬೇಸಿಗೆಯಲ್ಲಿ ಇದು ಆರೋಗ್ಯಕ್ಕೆ ಬೆಸ್ಟ್. ಹಾಗಿದ್ದರೆ ಮಜ್ಜಿಗೆ ಸಾರು ಮಾಡೋದು ಹೇಗೆ? ಏನೇನು ಬೇಕು? ಇಲ್ಲಿ ನೋಡೋಣ ಬನ್ನಿ.
ಬೇಕಾದ ಪದಾರ್ಥಗಳು: 1 ಚಮಚ ಎಣ್ಣೆ, ಕಾಲು ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಸ್ವಲ್ಪ ಹಿಂಗು, ಚಿಟಿಕೆ ಅರಶಿನ, ಒಣ ಅಥವಾ ಹಸಿ ಮೆಣಸಿನ ಕಾಯಿ, ಈರುಳ್ಳಿ ನುಣ್ಣಗೆ ಹೆಚ್ಚಿದ್ದು 1, ಕರಿಬೇವು ಎಲೆ 10, ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ನೀರು, ಮಜ್ಜಿಗೆ ಅಥವಾ ಮೊಸರು, ರುಚಿಗೆ ಬೇಕಾದಷ್ಟು ಉಪ್ಪು.
ನಿಮ್ಮ ಮನೆಯಲ್ಲಿ ಮಜ್ಜಿಗೆ ತಯಾರಿಸುತ್ತಿದ್ದರೆ ಅದೇ ಮಜ್ಜಿಗೆಯನ್ನು ನೀವು ಬಳಸಬಹುದು. ಮಜ್ಜಿಗೆ ಇಲ್ಲವಾದರೆ ಮೊಸರನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನೇ ನೀವು ಮಜ್ಜಿಗೆಯಾಗಿ ಬಳಸಬಹುದು.
ಮಾಡುವ ವಿಧಾನ: ಲೋ ಫ್ಲೇಮ್ನಲ್ಲಿ ಗ್ಯಾಸ್ ಆನ್ ಮಾಡಿ ಬಾಣಲೆ ಇಡಿ. ಈಗ ಒಂದು ಚಮಚ ಎಣ್ಣೆ ಹಾಕಿ. ಇದಕ್ಕೆ ಸಾಸಿವೆ, ಜೀರಿಗೆ ಹಾಕಿ. ಸಾಸಿವೆ ಒಡೆದು, ಜೀರಿಗೆ ಬಣ್ಣ ಬದಲಾದಾಗ ಈರುಳ್ಳಿ ಹಾಕಿ. ನಂತರ ಕರಿಬೇವು ಎಲೆ ಹಾಕಿ.
ನಂತರ ಚಿಕ್ಕ 1 ಹಸಿಮೆಣಸು ಮಧ್ಯ ಸೀಳಿ ಎರಡು ಕಟ್ ಮಾಡಿ ಹಾಕಿ. ಖಾರ ಬೇಡವೆಂದಿದ್ದರೆ ಇದನ್ನು ಅವಾಯ್ಡ್ ಮಾಡಬಹುದು. ಇದರ ಬದಲು ಒಣ ಮೆಣಸಿನ ಕಾಯಿ ಬಳಸೋದಾದರೆ 1 ಬ್ಯಾಡಗಿ ಮೆಣಸನ್ನು ಕಟ್ ಮಾಡಿ ಬಳಸಿ. ಎರಡೂ ಬೇಡ ಎಂದಿದ್ದರೆ ಸ್ಕಿಪ್ ಕೂಡಾ ಮಾಡಬಹುದು.
ನಂತರ ಈರುಳ್ಳಿಗೆ ಬೇಕಾದಷ್ಟು ಉಪ್ಪು ಹಾಕಿಕೊಳ್ಳಿ. ಈಗ ಸ್ವಲ್ಪ ಅರಶಿನವನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈರುಳ್ಳಿ ಬಣ್ಣ ಸ್ವಲ್ಪ ಬದಲಾಗುತ್ತಾ ಬಂದಹಾಗೆ ಗ್ಯಾಸ್ ಆಫ್ ಮಾಡಿ. ನಂತರ ಸ್ವಲ್ಪ ಹಿಂಗು ಸೇರಿಸಿ. ಇಷ್ಟೆಲ್ಲ ಮಾಡುವಾಗ ಗ್ಯಾಸ್ ಉರಿ ಲೋಫ್ಲೇಮ್ನಲ್ಲಿಯೇ ಇದ್ದರೆ ಸಾಕು.
ಇದನ್ನು ಚೆನ್ನಾಗಿ ಆರಲು ಬಿಡಿ. ನೀವು ರೆಡಿ ಮಾಡಿರುವ ಇವಿಷ್ಟೂ ತಣ್ಣಗಾಗಲಿ. ಚೆನ್ನಾಗಿ ತಣಿದ ನಂತರ ನೀವು ಕಡೆದಿಟ್ಟ ಮಜ್ಜಿಗೆಯನ್ನು ಸೇರಿಸಿ. ಕೊತ್ತಂಬರಿ ಸೊಪ್ಪನ್ನೂ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ನಿಮಗೆ ಎಷ್ಟು ತಿಳಿಬೇಕೋ ಅಷ್ಟು ನೀರು ಬೆರಿಸಿ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿಕೊಳ್ಳಿ.
ಈಗ ನಿಮ್ಮ ಮಜ್ಜಿಗೆ ಸಾರು ರೆಡಿ. ಇದನ್ನು ಊಟದ ಜೊತೆ ಸೇರಿಸೋದಾದರೆ ಸ್ವಲ್ಪ ದಪ್ಪಗೇ ಇರಲಿ. ಅಥವಾ ಇದನ್ನು ನೀವು ಬಾಯಾರಿಕೆಗೆ ಕುಡಿಯಲು ಅಥವಾ ಊಟದ ಜೊತೆ ಕುಡಿಯಲು ಬಯಸಿದರೆ ಹೆಚ್ಚು ನೀರು ಸೇರಿಸಿಕೊಳ್ಳಬಹುದು.