ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಕಾರಣ ಬೆಂಗಳೂರು ನಗರದ ಹಲವೆಡೆ ಫೆಬ್ರವರಿ 20ರಂದು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ.
ಈ ಬಗ್ಗೆ ಬೆಂಗಳೂರು ಜಲ ಮಂಡಳಿ ಮಾಹಿತಿ ನೀಡಿದೆ. ಮಾರತ್ತಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Bima Sakhi Yojana: ಮೋದಿ ಸರ್ಕಾರದಿಂದ ಬಂಫರ್ ಆಫರ್! ಈ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ ರೂ. 7,000
ಮಾರತ್ತಹಳ್ಳಿಯ ಜೀವಿಕಾ ಆಸ್ಪತ್ರೆ ಬಳಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ 20 ರಂದು ನಗರದ ವಿವಿಧ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆ ತಿಳಿಸಿದೆ.
ಎಷ್ಟು ಗಂಟೆಯ ವರಗೆ ನೀರು ಪೂರೈಕೆ ಇರಲ್ಲ?
ನಾಲ್ಕನೇ ಹಂತದ ಕಾವೇರಿ ನೀರಿನ ಪೂರೈಕೆ ಯೋಜನೆಯ ಕಾಮಗಾರಿ ಗುರುವಾರ ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ನಡೆಯಲಿದೆ. ಇದರಿಂದಾಗಿ ಈ ಅವಧಿಯಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ.
ಎಲ್ಲೆಲ್ಲಿ ನೀರು ಪೂರೈಕೆ ಸ್ಥಗಿತ?
ಮಾರತ್ತಹಳ್ಳಿ, ದೊಡ್ಡಾನೆಕುಂದಿ, ಮುನ್ನೆಕೊಳಲು, ಓಎಂಬಿಆರ್ಲೇಔಟ್, ಎಚ್ಆರ್ಬಿಆರ್ಲೇಔಟ್, ಸಿಗೇಹಳ್ಳಿ, ಬಟ್ಟರ ಹಳ್ಳಿ, ಮೇಡೆಹಳ್ಳಿ, ಟಿ.ಸಿ.ಪಾಳ್ಯ, ವಿಜಿನಪುರ, ಬೆಳ್ಳಂದೂರು, ಯಮಲೂರು, ಮುರುಗೇಶ್ ಪಾಳ್ಯ, ಕೋಣೆನ ಅಗ್ರಹಾರ, ಸಿ.ವಿ.ರಾಮನ್ ನಗರ, ಇಂದ್ರನಗರ,
ತಿಪ್ಪಸಂದ್ರ, ಜೀವನ್ ಭೀಮಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಅಗತ್ಯವಿರುವ ನೀರನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡು ಸಹಕರಿಸುವಂತೆ ಜಲಮಂಡಳಿಯ ಅಧ್ಯಕ್ಷರು ಮನವಿ ಮಾಡಿದ್ದಾರೆ.