ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಕುರಟಹಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಸಾಗುತ್ತಿದ್ದ ಐವರನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಡರಾತ್ರಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಚಿಕ್ಕಬಳ್ಳಾಪುರದ ಸಿಇಎನ್ ಠಾಣಾ ಪೊಲೀಸರು ಐವರ ಬಂಧಿಸಿದ್ದು, ಬರೋಬ್ಬರಿ 17.50 ಲಕ್ಷ ರೂ. ಮೌಲ್ಯದ 35 ಕೆಜಿ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಗರಿಗರೆಡ್ಡಿಪಾಳ್ಯ ನಿವಾಸಿಗಳಾದ ತಾಯಿ ದೇವಮ್ಮ ಹಾಗೂ ಮಗ ಆಂಜಿ ಹಾಗೂ ಪಲ್ಲಿಕುಂಟೆ ನಿವಾಸಿ ಮಾರಪ್ಪ , ವೆಂಕಟರಮಣ ಹಾಗೂದಂತೆ ಆದಿನಾರಾಯಣನನ್ನ ಬಂಧಿಸಲಾಗಿದೆ.