ಚಿಕ್ಕಬಳ್ಳಾಪುರ : ಸಿಎಂ ಸಿದ್ದರಾಮಯ್ಯ ಅವರು 2025ರ ಬಜೆಟ್ನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಬೇಕೆಂದು ಶಿಡ್ಲಘಟ್ಟ ಶಾಸಕ ಮೇಲೂರು ರವಿಕುಮಾರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ವಿಶೇಷವಾಗಿ ನೀರಾವರಿ ಯೋಜನೆಗೆ ಒತ್ತು ನೀಡಲು ಮನವಿ ಮಾಡಿದ್ದು, ಈ ಭಾಗದ ರೈತರಿಗೆ ನೀರಾವರಿಗೆ ತುಂಬಾ ಸಮಸ್ಯೆ ಇದೆ ಎಂದಿದ್ದಾರೆ.
ಶಿಡ್ಲಘಟ್ಟ ನಗರಕ್ಕೆ ಕಂದಾಯ ಭವನ ನಿರ್ಮಾಣ ಮಾಡುವಂತೆ ಕಂದಾಯ ಸಚಿವರಿಗೆ ಮನವಿ ಮಾಡಲಾಗಿದೆ. ಎತ್ತಿನಹೊಳೆ ಯೋಜನೆ ಬಹಳ ಕುಂಟಿತಗೊಂಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಕ್ಷೇತ್ರದಲ್ಲಿ ಇಂಜಿನೀಯರಿಂಗ್ ಕಾಲೇಜ್ ಹಾಗು ಕುಡಿಯುವ ನೀರಿನ ಡ್ಯಾಂ ನಿರ್ಮಾಣ ಮಾಡುವ ಗುರಿ ಇದೆ. ಮುಂದಿನ ದಿನಗಳಲ್ಲಿ ಆದಷ್ಟು ಅನುದಾನ ತಂದು ಯೋಜನೆ ರೂಪಿಸುತ್ತೇನೆ. 2025ರ ಮೇ ಜೂನ್ ವೇಳೆಗೆ ತಾಲುಕು ಪಂಚಾಯತಿ, ಜಿಲ್ಲಾ ಪಂಚಾಯತ್ ಚುನಾವಣೆ ನಡೆಯುವ ಮುನ್ಸೂಚನೆ ಇದೆ. ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದಿದ್ದಾರೆ.