ಬೆಳಗಾವಿ : ಅಪಘಾತ ತಪ್ಪಿಸಲು ಹೋಗಿ ಕೆಎಸ್ ಆರ್ ಟಿಸಿ ಬಸ್ ಪಲ್ಟಿಯಾಗಿದೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮೈಶಾಳ ಗ್ರಾಮದ ಬಳಿ ಘಟನೆ ನಡೆದಿದ್ದು, ಬಸ್ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ.
ಸತ್ತ ಕಾರ್ಮಿಕ ದೇಹ ಎಳೆದೊಯ್ದ ಸಿಬ್ಬಂದಿ ; ಕಲಬುರಗಿಯಲ್ಲಿ ಅಮಾನವೀಯ ಘಟನೆ
ಮಹಾರಾಷ್ಟ್ರದ ಮೀರಜ್ನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕೆಎಸ್ ಆರ್ಟಿಬಸ್ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿರುವ ಮೈಶಾಳ ಗ್ರಾಮದಲ್ಲಿ ಅಪಘಾತಕ್ಕೀಡಾಗಿದೆ. ಟ್ರಾಕ್ಟರ್ ಓವರಟೇಕ್ ಮಾಡುತ್ತಿದ್ದ ಬಸ್ , ಮುಂದೆ ಲಾರಿ ಬಂದಿದ್ದರಿಂದ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿ ಬಿದ್ದಿದೆ. ಬಸ್ ಬೀಳುತ್ತಿದ್ದಂತೆ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಬಸ್ ನಲ್ಲಿ 40 ಕ್ಕೂ ಹೆಚ್ಚು ಜನರ ಪ್ರಯಾಣಿಸುತ್ತಿದ್ದು, 23 ಜನರಿಗೆ ಸಣ್ಣಪುಟ್ಟ ಗಾಯ ಮೀರಜ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾಗವಾಡ ಬಸ್ ಡಿಪೊ ಮ್ಯಾನೇಜರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.