ರಾಜ್ಯ ಕಾಂಗ್ರೆಸ್ ನಲ್ಲಿನ ಬಣ ಬಡಿದಾಟ ನಿಲ್ಲೋ ಲಕ್ಷಣಗಳು ಕಾಣ್ತಿಲ್ಲ.ಒಂದ್ಕಂಡೆ ಸಿಎಂ ಬಣ ಡಿಕೆ ವಿರುದ್ದ ಚಾರ್ಜ್ ಮಾಡ್ತಿದ್ರೆ,ಮತ್ತೊದ್ಕಡೆ ಡಿಸಿಎಂ ಬಣ ಕೌಂಟರ್ಮೇಲೆ ಕೌಂಟರ್ ಕೊಡ್ತಿದೆ.ಈ ಬಣ ಬಡಿದಾಟಕ್ಕೆ ಕಡಿವಾಣ ಹಾಕಬೇಕಿದ್ದ ಎಐಸಿಸಿ ಅಧ್ಯಕ್ಷರೇ ಕುರ್ಚಿ ಕಿತ್ತಾಟಕ್ಕೆ ಹೈರಾಣಾಗಿದ್ದಾರೆ.ಮತ್ತೊಂದು ಕಡೆ ರಾಜಣ್ಣಸತೀಶ್ ಜಾರಕಿಹೊಳಿ ಬಳಿಕ ಪರಮೇಶ್ವರ್ ಇದೀಗ ದೆಹಲಿ ಟೂರ್ ತೆರಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ,ಪವರ್ ಶೇರಿಂಗ್,ದಲಿತ ಸಮಾವೇಶ ಎಲ್ಲವೂ ರಾಜ್ಯಕಾಂಗ್ರೆಸ್ ನಲ್ಲಿ ಜ್ವಾಲಾಮುಖಿಯಾಗಿ ಸ್ಫೋಟಿಸಿವೆ.ನಾಯಕರ ಬಹಿರಂಗ ಬಣಬಡಿದಾಟ ದಿನೇ ದಿನೇ ಹೆಚ್ಚಾಗ್ತಿದೆ.ಸಿಎಂ ಬಣದ ನಾಯಕರು ಡಿಕೆಶಿ ವಿರುದ್ಧ ಚಾರ್ಜ್ ಮಾಡಿದ್ರೆ,ಅತ್ತ ಡಿಸಿಎಂ ಬಣದ ನಾಯಕರು ಬಹಿರಂಗ ವಾಗ್ದಾಳಿಗಿಳಿದಿದ್ದಾರೆ.ನಿನ್ನೆಯಷ್ಠೇ ಡಿಸಿಎಂ ಡಿಕೆ ವಿರುದ್ದ ಸಚಿವ ಕೆ ಎನ್ ರಾಜಣ್ಣ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ರು.ಇಂದು ಡಿಕೆ ಬಣದ ನಾಯಕರು ಅದಕ್ಕೆ ಕೌಂಟರ್ ಮೇಲೆ ಕೌಂಟರ್ ಕೊಟ್ಟಿದ್ದಾರೆ.ಡಿಕೆಶಿ ಮೇಲೆ ರಾಜಣ್ಣಗೆ ಪ್ರೀತಿ,ಅದೆಷ್ಟು ಬಡಿಯುತ್ತಾರೋ ಬಡಿಯಲಿ,ಬಡಿದಷ್ಟೂ ತಾನೇಕಲ್ಲು ಶಿಲೆಯಾಗೋದು ಅಂತ ಮಾಜಿ ಸಂಸದ ಡಿ.ಕೆ.ಸುರೇಶ್ ಟಾಂಗ್ ಕೊಟ್ಟಿದ್ದಾರೆ.
Silver Anklets: ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?
ಸಚಿವ ಕೆ.ಎನ್.ರಾಜಣ್ಣ ಸ್ಟೇಟ್ ಮೆಂಟ್ ನಿಂದಾಗಿ ಪಕ್ಚ ಹಾಗೂ ಸರ್ಕಾರಕ್ಕೆ ಮುಜುಗರ ಎದುರಾಗಿದೆ.ನೇರವಾಗಿಯೇ ಡಿಕೆಶಿ ವಿರುದ್ಧ ವಾಗ್ದಾಳಿ ಮಾಡ್ತಿರೋದು ಪ್ರತಿಪಕ್ಷಗಳಿಗೂ ಆಹಾರವಾಗಿದೆ.ಇಷ್ಟಾದ್ರೂ ರಾಜಣ್ಣ ಸುಮ್ಮನಾಗ್ತಿಲ್ಲ.ಹಾಗಾಗಿ ಡಿಕೆಶಿ ಆಪ್ತ ಬಣದಲ್ಲಿ ಗುರ್ತಿಸಿಕೊಂಡಿರೋ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಹೈಕಮಾಂಡ್ ಗೆ ದೂರು ನೀಡಿದ್ದಾರೆ.ರಾಜಣ್ಣ ಬಾಯಿಗೆ ಬೀಗ ಹಾಕ್ಬೇಕು ಅಂತ ವೇಣುಗೋಪಾಲ್ ಗೆ ಮನವಿ ಮಾಡಿದ್ದಾರೆ..ಇತ್ತ ಮಾಜಿ ಸಂಸದ ಡಿ.ಕೆ.ಸುರೇಶ್ ಸದಾಶಿವನಗರದಲ್ಲಿರುವ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ರು.ರಾಜಣ್ಣ,ಸತೀಶ್ ಜಾರಕಿಹೊಳಿ,ಪರಮೇಶ್ವರ್ ಸೇರಿದಂತೆ ಬಹಿರಂಗ ಹೇಳಿಕೆ ಕೊಡ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ರು..
ಡಿಕೆಶಿ ಹಾಗೂ ರಾಜಣ್ಣ ನಡುವಿನ ಕಚ್ಚಾಟದ ಬಗ್ಗೆ ಇವತ್ತು ಸಿಎಂ ಸಿದ್ದರಾಮಯ್ಯ ಬಾಯಿ ತೆರೆದಿದ್ದಾರೆ..ಈಗ ಕಾಂಟ್ರೋವರ್ಸಿ ಬಗ್ಗೆ ನಾನು ಮಾತನಾಡಲ್ಲ,ಡಿಕೆ ರಾಜಣ್ಣ ಅವರವರ ಅಭಿಪ್ರಾಯ ಹೇಳಿದ್ದಾರಷ್ಟೇ ಎಂದು ನುಣುಚಿಕೊಂಡಿದ್ದಾರೆ..ಸಿಎಂ ಅಧಿಕಾರ ಹಂಚಿಕೆ ಸೂತ್ರದ ವಿಷಯದ ಬಗ್ಗೆ ಎಷ್ಟು ಬಾರಿ ಹೇಳಬೇಕು,ಅದನ್ನ ಹೈಕಮಾಂಡ್ ನಿರ್ಧರಿಸುತ್ತೆ ಅಂದ ಸಿಎಂ..ಇದೇ ವೇಳೆ ಮಹದೇವಪ್ಪ ಕೂಡ ಹೈಕಮಾಂಡ್ ಕಡೆ ಕೈತೋರಿಸಿ ಸೈಲೆಂಟಾದ್ರು..
ಒಟ್ನಲ್ಲಿ ಸಿಎಂ ಸಿದ್ದು ಹಾಗೂ ಡಿಸಿಎಂ ಡಿಕೆ ಬಣದ ಬಹಿರಂಗ ಬಡಿದಾಟ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಮಾತ್ರ ಕಾಣ್ತಿಲ್ಲ, ಆದ್ರೆ ಕುರ್ಚಿ ಕಿತ್ತಾಟದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗಿದ್ರು ಸ್ವತಃ ಎಐಸಿಸಿ ಅಧ್ಯಕ್ಷರೇ ಮೌನಕ್ಕೆ ಶರಣಾಗಿದ್ದಾರೆ.. ರಾಜ್ಯ ಕಾಂಗ್ರೆಸ್ ನಾಯಕರ ಬಣ ಬಡಿದಾಟ ದೆಹಲಿ ಹೈಕಮಾಂಡ್ ಮಟ್ಟಕ್ಕೆ ಹೋಗ್ತಿರುವುದು ಮತ್ತಷ್ಟು ಚರ್ಚಗೆ ಕಾರಣವಾಗಿದೆ.