ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಮಸ್ಕ್ ತಮ್ಮ ಹೆಸರು ಬದಲಾಯಿಸಿಕೊಳ್ಳಲು ಭರ್ಜರಿ ಆಫರ್ ನೀಡಿದ್ದು ಇದನ್ನು ಕೇಳಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ.
ಈ ಬಾರಿ ಮಸ್ಕ್ ವಿಕಿಪೀಡಿಯಾ ಬಗ್ಗೆ ಮಾತನಾಡಿದ್ದಾರೆ. ವಿಕಿಪೀಡಿಯಾ ಅನ್ನೋದು ಎಲ್ಲರಿಗೂ ಉಚಿತವಾಗಿ ಮಾಹಿತಿ ನೀಡುವ ವೆಬ್ಸೈಟ್. ಆದ್ರೆ ಮಸ್ಕ್ ವಿಕಿಪೀಡಿಯಾವನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲ, ವಿಕಿಪೀಡಿಯಾ ತನ್ನ ಹೆಸರನ್ನ ಬದಲಾಯಿಸಿದರೆ 8,600 ಕೋಟಿ ರೂಪಾಯಿ ಕೊಡ್ತೀನಿ ಅಂತ ಹೇಳಿದ್ದಾರೆ.
ವಿಕಿಪೀಡಿಯಾ ಹೆಸರನ್ನ ಬದಲಿಸೋಕೆ ಮಸ್ಕ್ 8,600 ಕೋಟಿ ರೂಪಾಯಿ ಕೊಡೋಕೆ ಮುಂದೆ ಬಂದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಸಂಬಂಧಿಸಿದಂತೆ ಒಬ್ಬರು “ಇದು ಇನ್ನೂ ವ್ಯಾಲಿಡ್ ಆಫರ್ ಆಗಿದೆಯಾ?” ಅಂತ ಮಸ್ಕ್ ಅವರನ್ನ ಕೇಳಿದರು. ಅದಕ್ಕೆ ಮಸ್ಕ್ “ಹೌದು, ಆಫರ್ ಇನ್ನೂ ಇದೆ. ಬನ್ನಿ, ಹೆಸರನ್ನು ಬದಲಾಯಿಸಿ” ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಮಸ್ಕ್ ವಿಕಿಪೀಡಿಯಾವನ್ನ ‘ಡಿಕಿಪೀಡಿಯಾ’ ಎಂದು ಬದಲಾಯಿಸಬೇಕೆಂದು ಹೇಳಿದ್ದರು. ವಿಕಿಪೀಡಿಯಾ ಹಣಕಾಸಿನ ವಿಷಯಗಳನ್ನ ಸರಿಯಾಗಿ ನಿಭಾಯಿಸುತ್ತಿಲ್ಲ, ಅದು ರಾಜಕೀಯವಾಗಿ ಪಕ್ಷಪಾತ ಮಾಡ್ತಿದೆ ಅಂತ ಮಸ್ಕ್ ಹಲವು ಭಾರಿ ಟೀಕಿಸಿದ್ದಾರೆ.