ಬೆಂಗಳೂರು: ಮಾರ್ಚ್ 3 ರಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ, ಮಾ.3ರಿಂದ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದೆ.
ಅಂದು ರಾಜ್ಯಪಾಲರು ಬಜೆಟ್ ಮೇಲಿನ ಭಾಷಣ ಮಾಡಲಿದ್ದು ರಾಜ್ಯಪಾಲರ ಭಾಷಣದ ಮೇಲೆ ಮೂರು ದಿನಗಳ ಕಾಲ ಚರ್ಚೆ ನಡೆಯಲಿದೆ. ನಂತರ ನಿಗದಿಯಂತೆ ಮಾ.7ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು. ಮಾರ್ಚ್ ಅಂತ್ಯಕ್ಕೆ ಬಜೆಟ್ ಮೇಲಿನ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದು ವಿವರಿಸಿದರು.
ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರಬೇಕಾ.? ಹಾಗಿದ್ರೆ ಈ ದಿನಗಳಲ್ಲಿ ಪೊರಕೆ ಖರೀದಿಸಬಾರದು.!
ಇವತ್ತು ಕೂಡ ಸಭೆ ಮಾಡಿದ್ದೀನಿ. ಕರ್ನಾಟಕ ಸರ್ಕಾರ ಯಾವಾಗಲೂ ರೈತರ ಹಿತ ಕಾಪಾಡಲು ಹಿಂದೆ ಬಿದ್ದಿಲ್ಲ. ಯಾವತ್ತೂ ಕೂಡ ರೈತರ ಜೊತೆ ಇರುತ್ತೇವೆ. ಕೃಷಿಕರ ಜೊತೆ ಇರುತ್ತೇವೆ ಎಂಬ ಮಾತು ಕೊಡುತ್ತೇನೆ. ಬೆಲೆ ಏರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಧಾರ. ರಾಜ್ಯ ಸರ್ಕಾರದಿಂದ ಬೆಲೆ ಏರಿಕೆಗೆ ಏನೆಲ್ಲಾ ಮಾಡಬೇಕು ಅದನ್ನ ಮಾಡುತ್ತೇವೆ ಎಂದು ಹೇಳಿದರು.
ಮೆಟ್ರೋ ರೈಲಿನ ದರ ನಿಗದಿ ಕಮಾಡಲು ಕೇಂದ್ರ ಸರ್ಕಾರ ಕಮಿಟಿ ಮಾಡಿದೆ. ಅದರಲ್ಲಿ ಇಬ್ಬರು ಕೇಂದ್ರದ ಅಧಿಕಾರಿಗಳು ಇರುತ್ತಾರೆ, ಒಬ್ಬರು ರಾಜ್ಯ ಸರ್ಕಾರದವರು ಇರುತ್ತಾರೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿಕೊಂಡು ದರ ಏರಿಕೆ ಮಾಡಿವೆ. ಬೆಲೆ ನಿಗದಿ ಮಾಡಲು ನಾವು ಮನವಿ ಕೊಡುತ್ತೇವೆ. ಆದರೆ, ಬೆಲೆ ನಿಗದಿ ಮಾಡುವುದು ಕಮಿಟಿಯವರು ಎಂದು ತಿಳಿಸಿದರು.