ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಲಿ ಹಾಗೂ ಧನ್ಯತಾ ಮದುವೆಗೆ ಸಿನಿಮಾ ರಂಗದವರು, ಅಭಿಮಾನಿಗಳು, ಸ್ನೇಹಿತರು, ರಾಜಕೀಯ ಗಣ್ಯರು ಸೇರಿದಂತೆ ಹಲವರು ಭಾಗಿಯಾಗಿ ಶುಭ ಹಾರೈಸಿದ್ದಾರೆ. ಡಾಲಿ ಆಪ್ತ ಗೆಳೆಯ ನಟ ವಸಿಷ್ಠ ಸಿಂಹ ಕೂಡ ಮದುವೆ ಸಮಾರಂಭಕ್ಕೆ ಆಗಮಿಸಿ ನವದಂಪತಿಗೆ ವಿಶ್ ಮಾಡಿದ್ದಾರೆ. ಈ ವೇಳೆ ಸ್ನೇಹಿತನಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
ಪ್ರಾಣ ಸ್ನೇಹಿತನ ಮದುವೆಗೆ ಆಗಮಿಸಿದ ವಸಿಷ್ಠ ಸಿಂಹ ಮೊದಲು ದಂಪತಿಗೆ ವಿಶ್ ಮಾಡಿದ್ದಾರೆ. ಬಳಿಕ ಗೋಲ್ಡ್ ಚೈನ್ ಅನ್ನು ಡಾಲಿ ಕತ್ತಿಗೆಗೆ ಹಾಕಿ ಪ್ರೀತಿಯ ಮುತ್ತು ನೀಡಿ ವಿಶ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
“ಟಗರು” ಸಿನಿಮಾದಲ್ಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ನೆಗೆಟಿವ್ ರೋಲ್ಗಳಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಧನಂಜಯ್ ಪಾತ್ರದ ಹೆಸರು ಡಾಲಿ ಹಾಗೂ ವಸಿಷ್ಠ ಪಾತ್ರದ ಹೆಸರು ಚಿಟ್ಟೆ ಎಂದಿತ್ತು. ಈ ಸಿನಿಮಾದಲ್ಲಿ ಇಬ್ಬರೂ ಪ್ರಾಣ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಫ್ಯಾನ್ಸ್ ಕೂಡ ಇವರನ್ನು ಡಾಲಿ-ಚೆಟ್ಟೆ ಎಂದೇ ಕರೆಯಲು ಶುರು ಮಾಡಿದರು. ಅಂದಿನಿಂದಲೂ ಧನು-ವಸಿಷ್ಠ ಅವರು ಸ್ಯಾಂಡಲ್ವುಡ್ನ ಕುಚಿಕುಗಳು ಎಂದು ಕರೆಸಿಕೊಂಡಿದ್ದಾರೆ.