ಸ್ಮಾರ್ಟ್ಫೋನ್ ಡಿಜಿಟಲ್ ಯುಗದ ಪ್ರತಿಯೊಬ್ಬರ ಜೀವನದ ಭಾಗವಾಗಿ ಬಿಟ್ಟಿದೆ. ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರು ಬಳಸುವ ಸಾಧನ ಸ್ಮಾರ್ಟ್ಫೋನ್. ಇತ್ತೀಚಿನ ವರದಿಯ ಅಂಕಿ ಅಂಶಗಳನ್ನು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ವರದಿಯು ಹೇಳಿರುವ ಪ್ರಕಾರ ಭಾರತವು 2026ರ ವೇಳೆಗೆ 1 ಶತಕೋಟಿ ಸ್ಮಾರ್ಟ್ಫೋನ್ ಬಳಕೆದಾರರನ್ನು ಹೊಂದಲಿದೆ. 2021ರಲ್ಲಿ ಭಾರತವು 1.2 ಬಿಲಿಯನ್ ಮೊಬೈಲ್ ಚಂದಾದಾರರನ್ನು ಹೊಂದಿತ್ತು, ಅದರಲ್ಲಿ ಸುಮಾರು 750 ಮಿಲಿಯನ್ ಜನರು ಸ್ಮಾರ್ಟ್ಫೋನ್ ಬಳಕೆದಾರರಿದ್ದಾರೆ. ಹಾಗಾಗಿ, ಮುಂದಿನ ಐದು ವರ್ಷದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಸ್ಮಾರ್ಟ್ಫೋನ್ ಬಳಕೆದಾರರನ್ನು ಹೊಂದಿರುವ 2ನೇ ದೇಶ ಎಂಬ ಖ್ಯಾತಿಯನ್ನು ಭಾರತ ಪಡೆಯಲಿದೆ
ಇಂದಿನ ದಿನಮಾನಗಳಲ್ಲಿ ಎಲ್ಲರ ಬಳಿ ಫೋನ್ ಇದ್ದೇ ಇರುತ್ತದೆ. ಇಂಟರ್ನೆಟ್ ಬಳಕೆಯೂ ಹೆಚ್ಚಾಗಿದೆ. ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಾಗಿವೆ. ಇದೆಲ್ಲದರ ಜೊತೆಯಲ್ಲಿಯೂ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್ಫೋನ್ಗಳು ಲಗ್ಗೆ ಇಡುತ್ತಿವೆ. ಕೆಲವರಂತೂ ಪ್ರತಿವರ್ಷ ಮೊಬೈಲ್ ಬದಲಾಯಿಸುತ್ತಿರುತ್ತಾರೆ. ಎಷ್ಟೇ ಮೊಬೈಲ್ ಬದಲಾದ್ರೂ ಸಂಖ್ಯೆ ಮಾತ್ರ ಅದೇ ಆಗಿರುತ್ತದೆ.
ಕಳೆದ 5-10 ವರ್ಷಗಳಿಂದ ನೀವು ಒಂದೇ ನಂಬರ್ ಬಳಸುತ್ತಿದ್ರೆ ಈ ಸುದ್ದಿಯನ್ನು ಓದಲೇಬೇಕು. ನೀವು ಒಂದೇ ಸಿಮ್ ಕಾರ್ಡ್ ಹೊಂದಿದ್ದು, ದಿನನಿತ್ಯದ ವಹಿವಾಟುಗಳಿಗೆ ಅದೇ ಸಂಖ್ಯೆ ಬಳಕೆ ಮಾಡುತ್ತಿದ್ರೆ ಇತರ ಬಳಕೆಗಾರರಗಿಂತ ನೀವು ತುಂಬಾ ವಿಭಿನ್ನವಾಗಿ ನಿಲ್ಲುತ್ತೀರಿ. ಮೊಬೈಲ್ ಸಂಖ್ಯೆ ಬಳಕೆ ಅವಧಿ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಗುರುತಿಸಬಹುದು. ಒಂದೇ ಸಂಖ್ಯೆಯನ್ನು ಐದರಿಂದ 10 ವರ್ಷಗಳವರೆಗೆ ಬಳಕೆ ಮಾಡುವ ವ್ಯಕ್ತಿಯ ಸ್ವಭಾವವನ್ನು ಸುಲಭವಾಗಿ ಗುರುತಿಸಲಾಗುತ್ತದೆ. ಆ ಗುಣಗಳು ಏನು ಎಂಬುದನ್ನು ನೋಡೋಣ ಬನ್ನಿ.
ನೀವು ಸುಸ್ತಿದಾರರು ಅಲ್ಲ
ಪದೇ ಪದೇ ಸಾಲ ತೆಗೆದುಕೊಂಡು ಸರಿಯಾದ ಸಮಯಕ್ಕೆ ಹಣ ಹಿಂದಿರುಗಿಸದ ವ್ಯಕ್ತಿಗಳು ಆಗಾಗ್ಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಿಸುತ್ತಿರುತ್ತಾರೆ. ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿರುತ್ತಾರೆ. ಕಳೆದ 5-10 ವರ್ಷಗಳಿಂದ ಒಂದೇ ಸಂಖ್ಯೆ ಬಳಕೆ ಮಾಡುತ್ತಿದ್ರೆ ನೀವು ಸುಸ್ತಿದಾರರು ಅಲ್ಲ ಎಂದರ್ಥ.
ನಂಬಿಕಸ್ಥ
ಒಂದೇ ನಂಬರ್ ಬಳಸುವ ವ್ಯಕ್ತಿ ನಂಬಿಕಸ್ಥ ಎಂದು ನಂಬಬಹುದು. ಕೆಲವರು ಮೊಬೈಲ್ ಕಳೆದುಕೊಂಡರೂ ನಿಯಮಗಳ ಪ್ರಕಾರ, ಅದೇ ಸಂಖ್ಯೆಯ ಸಿಮ್ ಪಡೆದುಕೊಳ್ಳುತ್ತಾರೆ. ಈ ಮೂಲಕ ತಮ್ಮ ಎಲ್ಲಾ ಸಂಪರ್ಕವನ್ನು ಪುನಃ ಸಾಧಿಸಿಕೊಳ್ಳುತ್ತಾರೆ. ಇಂತಹ ವ್ಯಕ್ತಿಗಳು ಯಾರನ್ನೂ ಸಹ ಕಳೆದುಕೊಳ್ಳಲು ಇಷ್ಟಪಡಲ್ಲ. ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿತ್ವ ಹೊಂದಿರುತ್ತಾರೆ.
ಪ್ರಾಮಾಣಿಕತೆ
ನೀವು ಹಲವಾರು ವರ್ಷಗಳಿಂದ ಒಂದೇ ನಂಬರ್ ಬಳಕೆ ಮಾಡುತ್ತಿದ್ದರೆ ನಿಮ್ಮನ್ನು ಪ್ರಾಮಾಣಿಕ ಎಂದು ಪರಿಗಣಿಸಬಹುದು. ಯಾವುದೇ ಸಂದರ್ಭದಲ್ಲಿ ಪ್ರಾಮಾಣಿಕತೆಯನ್ನು ಯಾವ ವಿಷಯಕ್ಕೂ ರಾಜಿ ಮಾಡಿಕೊಳ್ಳಲ್ಲ ಎಂದರ್ಥ. ಮೋಸ ಮಾಡುವ ಗುಣ ಹೊಂದಿರುವ ವ್ಯಕ್ತಿಗಳು ಅಧಿಕ ಸಿಮ್ ಮತ್ತು ನಂಬರ್ ಬದಲಾಯಿಸುತ್ತಿರುತ್ತಾರೆ.
ಆರೋಪ ರಹಿತ ವ್ಯಕ್ತಿ
ಯಾವುದೇ ಆರೋಪವಿಲ್ಲದ ವ್ಯಕ್ತಿ ಒಂದೇ ಸಂಖ್ಯೆಯನ್ನು ದೀರ್ಘಕಾಲದವರೆಗೆ ಬಳಸುತ್ತಾರೆ. ನಿಮ್ಮ ವಿರುದ್ಧ ಯಾರಿಗೂ ಯಾವುದೇ ದೂರು/ಆರೋಪಗಳಿಲ್ಲ ಎಂದರ್ಥ. ಒಂದೇ ಸಂಖ್ಯೆಯನ್ನು ದೀರ್ಘಕಾಲದವರೆಗೆ ಬಳಸಿದ ವ್ಯಕ್ತಿತ್ವ ಪರಿಶುದ್ಧವಾಗಿರುತ್ತೆ ಎಂದು ನಂಬಬಹುದು.