ಮೈಸೂರು: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ ಮತ್ತು ಡಾಕ್ಟರ್ ಧನ್ಯತಾ ವಿವಾಹ ಅದ್ಧೂರಿಯಾಗಿ ನೆರವೇರಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನವದಂಪತಿ ಇದೀಗ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಧಾರಾ ಕಾರ್ಯಕ್ರಮದ ಬಳಿಕ ಮಾತನಾಡಿದ ಡಾಲಿ, ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ಸಾವಿರಾರು ಜನರು ಬಂದು ಆಶೀರ್ವದಿಸಿದ್ದಾರೆ. ಮೈಸೂರಿನಲ್ಲಿ ನನ್ನ ಮದುವೆ ಸಾರ್ಥಕ ಅನ್ನಿಸ್ತು ಎಂದಿದ್ದಾರೆ.
ಕಾರ್ಯಕ್ರಮ ಶಾಂತಿಯುತವಾಗಿ ಆಯಿತು. ಆರತಕ್ಷತೆಗೆ ಜನ ಬಂದಿದ್ದು ಖುಷಿ ಆಯಿತು. ನಾನು ಅಂದುಕೊಂಡಂತೆ ಆಗಿದೆ. ಎಲ್ಲರು ಖುಷಿ ಆಗಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕು ಗೊತ್ತಿಲ್ಲ. ಅಭಿಮಾನಿಗಳು ತುಂಬಾ ಶಾಂತಿಯುತವಾಗಿ ನಡೆದುಕೊಂಡಿದ್ದಾರೆ ಅಂದರು.
ಇನ್ನು ಡಾಲಿ ಪತ್ನಿ ಧನ್ಯತಾ ಮಾತನಾಡಿ, ಇಷ್ಟು ಜನರನ್ನ ನಾನು ನೋಡಿಲ್ಲ. ತಾಳಿ ಕಟ್ಟುವಾಗ ನಾನು ತುಂಬಾ ಭಾವುಕಳಾದೆ. ಡಾಲಿ ಕುಟುಂಬ ನನ್ನ ಕುಟುಂಬ. ನನ್ನ ಮನೆಗೆ ಹೋಗೋಕೆ ತುಂಬಾ ಖುಷಿ ಇದೆ. ನಾನು ಡಾಲಿ ಮನೆಗೆ ಹೋಗೋಕೆ ತುಂಬಾ ಕಾಯ್ತಾ ಇದ್ದೇನೆ. ಇಷ್ಟು ಪ್ರೀತಿ ಆಶೀರ್ವಾದ ನೋಡಿ ತುಂಬಾ ಖುಷಿ ಆಯಿತು ಎಂದು ಸಂತಸ ವ್ಯಕ್ತಪಡಿಸಿದರು.