ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಅವರು ಜೈಲಿಗೆ ಹೋಗಿ ಬಂದ ನಂತರ ಮತ್ತಷ್ಟು ಫೇಮಸ್ ಆಗಿದ್ದಾರೆ. ಅವರ ಫ್ಯಾನ್ಸ್ ಬೇಸ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇತ್ತೀಚೆಗಂತೂ ಅವರ ಕ್ರೇಜ್ ಭಾರೀ ಹೆಚ್ಚಾಗಿದ್ದು ರಿ ರಿಲೀಸ್ ಆದ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಬಂದಿದೆ.
ನಿಮ್ಮ ದೇಹದಲ್ಲಿ ಹೀಗೆಲ್ಲಾ ಆಗ್ತಿದ್ಯಾ!? ಹಾಗಿದ್ರೆ ನೀವು ಈಗಲೇ ಎಚ್ಚೆತ್ತುಕೊಳ್ಳಿ!
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯಾದ್ಯಂತ ಅವರ ಅಭಿಮಾನಿಗಳು ಡಿಬಾಸ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದೀಗ ಫ್ಯಾನ್ಸ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಹುಟ್ಟುಹಬ್ಬದ ದಿನವೇ ಅವರ ‘ಡೆವಿಲ್’ ಸಿನಿಮಾ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಕಂಡು ಮಾತೇ ಬರ್ತಾ ಇಲ್ಲಾ ಬಾಸ್ ಅಂತ ಕಮೆಂಟ್ ಮಾಡುತ್ತಿದ್ದಾರೆ.
ಅಂತೂ ದರ್ಶನ್ ಟೀಸರ್ ಔಟ್ ಆಗಿದೆ. ಕೊನೆಯ ದರ್ಶನ್ ಡೈಲಾಗ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬರೀ ಆ್ಯಕ್ಷನ್ನಲ್ಲಿಯೇ ದಚ್ಚು ಮಾಸ್ ಆಗಿ ಉತ್ತರ ಕೊಟ್ಟಿದ್ದಾರೆ. ದರ್ಶನ್ ಲುಕ್, ಆ್ಯಕ್ಷನ್, ಫೈಟಿಂಗ್ ಸೀನ್, ಮ್ಯೂಸಿಕ್ ಎಲ್ಲವೂ ಮಸ್ತ್ ಅಂತಿದ್ದಾರೆ ಫ್ಯಾನ್ಸ್.
ದರ್ಶನ್ ಹುಟ್ಟುಹಬ್ಬದ ಸಂಭ್ರಮಕ್ಕೆ ಡೆವಿಲ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ.. 1 ನಿಮಿಷ 4 ಸೆಕೆಂಡುಗಳ ಟೀಸರ್ ನಲ್ಲಿ ದರ್ಶನ್ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ.. ಪಬ್ ಒಂದ್ರಲ್ಲಿ ನಡೆಯೋ ಆ್ಯಕ್ಷನ್ ಸೀಕ್ವೆನ್ಸ್ ಒಂದರ ಝಲಕ್ ಇದರಲ್ಲಿ, ಇದ್ದು ದರ್ಶನ್ ಈ ಮುಂಚೆ ಕಂಡದಕ್ಕಿಂತ ಡಿಫರೆಂಟ್ ಆಗಿ ಕಾಣಿಸಿದ್ದಾರೆ..
ಚಾಲೆಂಜ್.. ಹೂಂ ಅಂತಷ್ಟೇ ಡೈಲಾಗ್ ಇಲ್ಲಿ ಇದ್ದು, ಅಭಿಮಾನಿಗಳಿಗೆ ಇದೊಂದೇ ಡೈಲಾಗ್ ಹುಚ್ಚಿಡಿಸುವಂತಿದೆ.. ಡೆವಿಲ್ ಸಿನಿಮಾಗೆ ಮಿಲನ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ.. ಜಯಮಾತಾ ಕಂಬೈನ್ಸ್ ನಡಿ, ಪ್ರಕಾಶ್ ಅವರೇ ಈ ಸಿನಿಮಾಗೆ ಬಂಡವಾಳ ಹಾಕಿದ್ದು, ದರ್ಶನ್ ಜೊತೆ ನಾಯಕಿಯಾಗಿ ಹೊಸ ಹುಡುಗಿ ರಚನಾ ರೈ ನಟಿಸಲಿದ್ದಾರೆ..