ರೆಫ್ರಿಜರೇಟರ್ ಅನ್ನು ಪ್ರತಿಯೊಬ್ಬರ ಮನೆಯಲ್ಲೂ ಬಳಸಲಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಂತೂ ಫ್ರಿಡ್ಜ್ನ ಬಳಕೆ ಹೆಚ್ಚು. ತಂಪಾಗಿಸುವ ನೀರಿನಿಂದ ಹಿಡಿದು ಪಾನೀಯಗಳಿಗಾಗಿ ಐಸ್ ಕ್ಯೂಬ್ಗಳನ್ನು ತಯಾರಿಸುವುದು ಮತ್ತು ಆಹಾರವನ್ನು ತಾಜಾವಾಗಿಡಲು ರೆಫ್ರಿಜರೇಟರ್ನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ರೆಫ್ರಿಜರೇಟರ್ ದೋಷಗಳಿಂದಾಗಿ ಹೆಚ್ಚು ಐಸ್ನ್ನು ಉತ್ಪತ್ತಿ ಮಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ಫ್ರೀಜರ್ನಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗುತ್ತದೆ. ಇದು ಹೆಚ್ಚಾಗಿ ಹಳೆಯ ಫ್ರಿಡ್ಜ್ಗಳಲ್ಲಿ ನಡೆಯುತ್ತದೆ. ಆದರೆ ಕೆಲವೊಮ್ಮೆ ನಿರ್ಲಕ್ಷ್ಯದಿಂದ ಹೊಸ ಫ್ರಿಡ್ಜ್ ನಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಮದ್ಯಪ್ರಿಯರಿಗೆ ಬಿಗ್ ಶಾಕ್: ಈ ಪ್ರದೇಶದಲ್ಲಿ ಏ.1 ರಿಂದ ಎಣ್ಣೆ ಬ್ಯಾನ್!
ಪ್ರತಿಯೊಬ್ಬರ ಮನೆಯಲ್ಲೂ ಚಿಕ್ಕದೋ ದೊಡ್ಡದೋ ಫ್ರಿಜ್ ಇರುತ್ತದೆ. ಆದರೆ, ಅದನ್ನು ಹೇಗೆ ನಿರ್ವಹಿಸಬೇಕೆಂದು ಬಹಳಷ್ಟು ಜನರಿಗೆ ತಿಳಿದಿಲ್ಲ. ಸರಿಯಾಗಿ ಬಳಸದಿದ್ದರೆ ಫ್ರೀಜರ್ನಲ್ಲಿ ನೀರು ಐಸ್ ಆಗಿ ಜಮೆಯಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ಫ್ರೀಜರ್ ಬಾಗಿಲು ತೆರೆಯುವುದು ಮತ್ತು ಮುಚ್ಚುವುದು ಕಷ್ಟವಾಗುತ್ತದೆ. ನಂತರ ಫ್ರಿಜ್ನ ಕಾರ್ಯಕ್ಷಮತೆಯೂ ಹಾಳಾಗುತ್ತದೆ.
ಫ್ರಿಜ್ನಲ್ಲಿ ಐಸ್ ಜಮೆಯಾಗಲು ಕಾರಣಗಳು:
1. ಫ್ರಿಜ್ ಬಾಗಿಲು ಅಥವಾ ಗ್ಯಾಸ್ಕೆಟ್ ಹಾಳಾದರೆ ಫ್ರೀಜರ್ನಲ್ಲಿ ಐಸ್ ಜಮೆಯಾಗುತ್ತದೆ. ಗಾಳಿ ಒಳಗೆ ಹೋಗಿ ಸುತ್ತುತ್ತಿರುತ್ತದೆ. ಆದ್ದರಿಂದ ಫ್ರಿಜ್ ಬಾಗಿಲು, ಗ್ಯಾಸ್ಕೆಟ್ ಹಾಳಾದರೆ ತಕ್ಷಣ ಬದಲಾಯಿಸಿ.
2. ಫ್ರಿಜ್ನಲ್ಲಿ ನೀರನ್ನು ಆವಿಯಾಗಿಸುವ ಕಾಯಿಲ್ ಹಾಳಾದರೆ ಫ್ರೀಜರ್ನಲ್ಲಿ ಐಸ್ ಜಮೆಯಾಗುತ್ತದೆ. ಈ ಕಾಯಿಲ್ ಫ್ರಿಜ್ನಲ್ಲಿ ನೀರು ಹೆಚ್ಚಾದರೆ ಅದನ್ನು ಹೊರಗೆ ಕಳುಹಿಸುತ್ತದೆ. ಆದ್ದರಿಂದ ಈ ಕಾಯಿಲ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸಿದರೆ ಫ್ರಿಜ್ನಲ್ಲಿ ಐಸ್ ಜಮೆಯಾಗುವುದಿಲ್ಲ.
3. ಫ್ರಿಜ್ನಲ್ಲಿರುವ ವಾಟರ್ ಫಿಲ್ಟರ್ ಹಾಳಾದರೆ ಫ್ರೀಜರ್ನಲ್ಲಿ ಐಸ್ ಜಮೆಯಾಗುತ್ತದೆ. ಆದ್ದರಿಂದ ವಾಟರ್ ಫಿಲ್ಟರ್ ಹಾಳಾದರೆ ತಕ್ಷಣ ಬದಲಾಯಿಸಿ.
ಫ್ರೀಜರ್ನಲ್ಲಿ ಐಸ್ ತಡೆಯಲು ಸಲಹೆಗಳು:
ಮೊದಲ ಸಲಹೆ: ಮೊದಲು ಫ್ರಿಜ್ ಸ್ವಿಚ್ ಆಫ್ ಮಾಡಿ. ನಂತರ ಫ್ರಿಜ್ ಅನ್ನು ನೀರು ಸೋರದ ಜಾಗಕ್ಕೆ ಸರಿಸಿ. ಈಗ ಬಿಸಿ ನೀರು ತೆಗೆದುಕೊಳ್ಳಿ. ಒಂದು ಕಪ್ನಿಂದ ನೀರನ್ನು ಫ್ರೀಜರ್ನಲ್ಲಿ ಹಾಕಿ. ಐಸ್ ಕರಗುತ್ತದೆ.
ಎರಡನೇ ಸಲಹೆ: ಒಂದು ಪಾತ್ರೆಯಲ್ಲಿ ಬಿಸಿ ನೀರು ಹಾಕಿ ಫ್ರೀಜರ್ನಲ್ಲಿ ಇಟ್ಟು ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಫ್ರೀಜರ್ ಬಾಗಿಲು ಮುಚ್ಚಿ. ಸ್ವಲ್ಪ ಹೊತ್ತಿನ ನಂತರ ಐಸ್ ಕರಗುತ್ತದೆ.
ಮೂರನೇ ಸಲಹೆ: ನಿಮ್ಮ ಮನೆಯಲ್ಲಿ ಹೇರ್ ಡ್ರೈಯರ್ ಇದ್ದರೆ ಫ್ರೀಜರ್ನಲ್ಲಿರುವ ಐಸ್ ಅನ್ನು ಸುಲಭವಾಗಿ ಕರಗಿಸಬಹುದು. ಫ್ರೀಜರ್ ಬಾಗಿಲು ತೆರೆದು ಹೇರ್ ಡ್ರೈಯರ್ ಆನ್ ಮಾಡಿ. ಬಿಸಿ ಗಾಳಿ ಬೀಸಿ ಐಸ್ ಕರಗುತ್ತದೆ.