ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಪೂರ್ಣಾವಧಿ ಸಿಎಂ ಚರ್ಚೆ ವಿಚಾರ ತೀವ್ರಗೊಳ್ತಿದೆ.. ಸಿದ್ದರಾಮಯ್ಯ ಪರ ಘಟಾನುಘಟಿ ನಾಯಕರು ಬ್ಯಾಟಿಂಗ್ ಮಾಡಲು ಶುರು ಮಾಡಿದ್ದಾರೆ.. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ ಶಿವಕುಮಾರ್ ಅವ್ರನ್ನ ಕೆಳಗಿಳಸಲು ಭಾರೀ ರಣತಂತ್ರ ರೂಪಿಸ್ತಿದ್ದಾರೆ.. ಸದ್ಯದಲ್ಲೇ ಬೃಹತ್ ಅಹಿಂದ ಸಮಾವೇಶ ನಡೆಸಿ, ಸಿದ್ದರಾಮಯ್ಯ ಪರ ಶಕ್ತಿ ಪ್ರದರ್ಶನಕ್ಕೂ ಸಿದ್ದತೆ ಮಾಡಿಕೊಳ್ತಿದ್ದಾರೆ..
ಯೆಸ್.. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನಡುವೆ ಬಣ ಬಡಿದಾಟ ತಾರಕಕ್ಕೇರಿದೆ.. ಡಿಕೆಶಿ ವಿರುದ್ದ ಸತೀಶ್ ಜಾರಕಿಹೊಳಿ, ಕೆಎನ್ ರಾಜಣ್ಣ ನೇರವಾಗಿಯೇ ಸೆಡ್ಡು ಹೊಡೆದಿದ್ದಾರೆ.. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಬದಲಾವಣೆಗೆ ಪಟ್ಟು ಹಿಡಿದಿದ್ದು, ಡಿಕೆಶಿಗೆ ಮಾತ್ರ ಡಿಸಿಎಂ ಜೊತೆ ಎರಡು ಖಾತೆ ಹಗೂ ಅಧ್ಯಕ್ಷಗಿರಿಯೇಕೆ ಅಂತಾ ಪ್ರಶ್ನೆ ಹಾಕಿದ್ದಾರೆ.
ಸಿದ್ದರಾಮಯ್ಯ ಆಪ್ಯರ ನಡೆಯಿಂದ ಹೈಕಮಾಂಡ್ ನಾಯಕರೂ ಇಕ್ಕಟ್ಟಿಗೆ ಸಿಲುಕುವಂತಾಗಿದೆ.. ಡಿ.ಕೆ ಶಿವಕುಮಾರ್ ಗೆ ಕೊಟ್ಟಂತೆ ನಮಗೂ ಎರಡು ಹುದ್ದೆ ನೀಡಿ.. ಕೆಪಿಸಿಸಿ ಅಧ್ಯಕ್ಷತೆ ಜೊತೆಗೆ ಮಂತ್ರಿಸ್ಥಾನ ನಿಭಾಯಿಸಲು ನಾವೂ ಕೂಡ ಸಮರ್ಥರಿದ್ದೇವೆ ಎಂದು ವರಿಷ್ಠರ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದ್ದಾರಂತೆ..
Bank Job: ಬ್ಯಾಂಕ್ʼನಲ್ಲಿ ಕೆಲಸ ಮಾಡಲು ಬಯಸಿದವರಿಗೆ ಉದ್ಯೋಗಾವಕಾಶ! ಯಾವುದೇ ಲಿಖಿತ ಪರೀಕ್ಷೆ ಇಲ್ಲ
ಕೆ.ಸಿ ವೇಣುಗೋಪಾಲ್, ಸುರ್ಜೇವಾಲ ಭೇಟಿ ವೇಳೆ ಈ ಬಗ್ಗೆ ಅಭಿಪ್ರಾಯ ತಿಳಿಸಿ ಬಂದಿದ್ದಾರೆಂದು ಹೇಳಲಾಗ್ತಿದೆ.. ಒಬ್ಬರಿಗೆ ಒಂದೇ ಹುದ್ದೆ ಎಂದು ಎಐಸಿಸಿಯ ನಿಯಮವಿದೆ.. ಅದು ಡಿ.ಕೆ ಶಿವಕುಮಾರ್ ಗೆ ಅನ್ವಯ ಆಗಲ್ವಾ ಅಂತಾನೂ ಪ್ರಶ್ನೆ ಮಾಡಿದ್ದಾರಂತೆ.. ದಲಿತ ನಾಯಕರ ಸಭೆಗಳಿಗೆ ಬ್ರೇಕ್ ಹಾಕಿಸಿದ್ದೇ ಡಿಕೆಶಿಗೆ ಮುಳುವಾಗ್ತಿದೆ ಅನ್ಸುತ್ತೆ.. ದಲಿತ ಸಚಿವರ ನಡೆಯಿಂದ ಡಿಕೆಶಿಗೂ ದಿನೇ ದಿನೇ ತಲೆನೋವು ಹೆಚ್ಚಾಗ್ತಿದೆ.. ಹೆಜ್ಜೆ ಹೆಜ್ಜೆಗೂ ಡಿ.ಕೆ ಶಿವಕುಮಾರ್ ಹಾದಿಗೆ ಮೊಗ್ಗುಲ ಮುಳ್ಳಾಗ್ತಿದ್ದಾರೆ..
ಸಿದ್ದರಾಮಯ್ಯನವ್ರೇ ಪೂರ್ಣಾವಧಿ ಸಿಎಂ ಆಗಿರಬೇಕು ಅಂತಾ ಪ್ರಮುಖ ನಾಯಕರು ಅಖಾಡಕ್ಕಿಳಿದಿದ್ದಾರೆ.. ಸಿದ್ದರಾಮಯ್ಯ ಐದು ವರ್ಷವೂ ಸಿಎಂ ಆಗಿರಬೇಕೆಂದು ಒತ್ತಾಯ ಮಾಡ್ತಿದ್ದಾರೆ.. ದಲಿತ ನಾಯಕರ ದೆಹಲಿ ಪ್ರವಾಸ ಬಳಿಕ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಕೂಗು ಜೋರಾಗ್ತಿದೆ.. ಸಿದ್ದು ಪರ ಬಲ ಪ್ರದರ್ಶನಕ್ಕೂ ಈ ಸಚಿವರು ಸಜ್ಜಾಗಿದ್ದಾರೆ.. ಎಸ್ಸಿ, ಎಸ್ಟಿ ಸಮಾವೇಶದ ರೂಪುರೇಷೆಯೇ ಬದಲಾವಣೆ ಆಗ್ತಿದೆ.. ಶೋಷಿತರ ಹೆಸರಿನಲ್ಲಿ ಬೃಹತ್ ಅಹಿಂದ ಸಮಾವೇಶಕ್ಕೆ ತಯಾರಿ ಆರಂಭವಾಗಿದೆ..
ನಿನ್ನೆ ಸಿಎಂ ಬಳಿಯೂ ಸತೀಶ್ ಜಾರಕಿಹೊಳಿ, ಮಹದೇವಪ್ಪ ಚರ್ಚೆ ಮಾಡಿದ್ದಾರಂತೆ.. ಬಜೆಟ್ ಅಧಿವೇಶನದ ಬಳಿಕ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅಹಿಂದ ಸಮಾವೇಶ ನಡೆಸಲು ಚಿಂತನೆ ಮಾಡಿದ್ದಾರೆ.. ಹಾಸನ ಸಮಾವೇಶ ಹೈಜಾಕ್ ಮಾಡಿದ್ದ ಡಿ.ಕೆ ಶಿವಕುಮಾರ್ ಗೆ ಕೌಂಟರ್ ಕೊಡ್ತಿದ್ದಾರೆ.. ಬಿಜೆಪಿ ಯಡಿಯೂರಪ್ಪ, ಜೆಡಿಎಸ್ ಗೆ ದೇವೇಗೌಡ್ರು ಹೇಗೆ ಸ್ಟ್ರೆಂಥೋ ಹಾಗೆಯೇ ಕಾಂಗ್ರೆಸ್ ಗೆ ಸಿದ್ದರಾಮಯ್ಯ ಸ್ಟ್ರೆಂಥ್ ಅಂತಾ ಕೆ.ಎನ್ ರಾಜಣ್ಣ ಹೇಳಿದ್ದಾರೆ.. ಸಿದ್ದರಾಮಯ್ಯನವ್ರನ್ನ ಟಚ್ ಮಾಡಿದ್ರೆ ಪಕ್ಷಕ್ಕೆ ಉಳಿಗಾಲವಿಲ್ಲ ಅನ್ನೋ ಸಂದೇಶವನ್ನೂ ಈ ಮೂಲಕ ರವಾನೆ ಮಾಡಿದ್ದಾರೆ..
ಇನ್ನು ಸಿದ್ದರಾಮಯ್ಯ ಮಾಸ್ ಲೀಡರ್.. ಬೇಡ ಅಂತ ಹೇಳೋರು ಯಾರು ಅಂತಾ ಸಚಿವ ಮಹದೇವಪ್ಪ ಹೇಳಿದ್ದಾರೆ.. ಹೊಸ ನಾಯಕತ್ವ ಬರುವವರೆಗೆ ಸಿದ್ದರಾಮಯ್ಯ ಇರಬೇಕು.. ಸಿದ್ದರಾಮಯ್ಯ ಸಂಘಟನೆ ರಾಜ್ಯಕ್ಕೆ ಅಗತ್ಯ ಇದೆ.. ಅವರನ್ನ ಕಳೆದುಕೊಳ್ಳೋಕೆ ಯಾರಿಗೂ ಇಷ್ಟ ಇಲ್ಲ ಅಂತಾ ಮಹದೇವಪ್ಪ ಹೇಳಿದ್ರು.. ಸಿದ್ದರಾಮಯ್ಯನವ್ರೇ ಸಿಎಂ ಆಗಿ ಮುಂದುವರೆಯಬೇಕು ಅನ್ನೋ ಆಸೆ ನಮಗೂ ಇದೆ ಅಂತಾ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು.. ಸಿದ್ದರಾಮಯ್ಯನವ್ರು ನಮಗೆ ಬೇಕೆ ಬೇಕು.. ಮುಂದಿನ ನಾಯಕತ್ವ ಬೆಳೆಸೋವರೆಗೂ ರಾಜಕಾರಣದಲ್ಲಿರಬೇಕು ಅಂದ್ರು..
ದಲಿತ ಸಚಿವರ ನಡೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಅಸಮಧಾನ ಹೊರಹಾಕಿದ್ದಾರೆ.. ಕೆಎನ್ ರಾಜಣ್ಣ ಹೇಳಿಕೆಗೆ ಇಂಪಾರ್ಟೆನ್ಸ್ ಕೊಡೋ ಅಗತ್ಯವಿಲ್ಲ.. ಹೈಕಮಾಂಡ್ ಸ್ಟ್ರಾಂಗ್ ಇದೆ.. ಹೈಕಮಾಂಡ್ ಶ್ರೀಕೃಷ್ಟ ಇದ್ದಂತೆ.. ಶಿಶುಪಾಲನ ಕಥೆ ಕೇಳಿರಬಹುದು ಅಂತಾ ಕೌಂಟರ್ ಕೊಟ್ರು.. ಅಲ್ಲದೇ ಬಹಿರಂಗವಾಗಿ ಮಾತಾಡೋದು ಶಿಸ್ತಿನ ಉಲ್ಲಂಘನೆ ಆಗಲಿದೆ ಅಂತಾನೂ ಎಚ್ಚರಕೆ ನೀಡಿದ್ರು..
ಒಟ್ನಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಗಾದಿಗೆ ಸಿದ್ದು ಆಪ್ತರು ಜೇಡರ ಬಲೆಯಂತೆ ನಿಂತಿದ್ದಾರೆ.. ಸಿದ್ದರಾಮಯ್ಯನವ್ರನ್ನೇ ಮುಂದುವರೆಸಿ ಇಲ್ಲವೇ ದಲಿತ ಸಮುದಾಯಕ್ಕೆ ಅವಕಾಶ ನೀಡಿ ಅಂತಾ ಡಿಮ್ಯಾಂಡ್ ಮಾಡ್ತಿದ್ದಾರೆ.. ಸಿದ್ದರಾಮಯ್ಯ ಆಪ್ತರ ನಡೆಯಿಂದ ಡಿ.ಕೆ ಶಿವಕುಮಾರ್ ಕೆರಳಿ ಕೆಂಡವಾಗಿದ್ರೂ, ಟೆಂಪಲ್ ರನ್ ನಡೆಸ್ತಾ, ಮೌನಕ್ಕೆ ಶರಣಾಗಿದ್ದಾರೆ.. ಬಜೆಟ್ ಅಧಿವೇಶನ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಲೋಕ ಕಲ್ಲೋಲ ವಾತಾವಣರ ಉಂಟಾಗಲಿದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬರ್ತಿದೆ..