ಬೆಂಗಳೂರು: ಚುನಾವಣೆಗೆ ನಿಲ್ಲದಿದ್ದರೂ, ರಾಜಕೀಯ ನಿವೃತ್ತಿಯಾದರೂ ಸಿದ್ದರಾಮಯ್ಯನವ್ರು ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವ್ರು ನಮಗೆ ಬೇಕೆ ಬೇಕು. ಹಿಂದೆಯೂ ಇದನ್ನ ಹೇಳಿದ್ದೆ, ಈಗಲೂ ಹೇಳ್ತೇನೆ. ಚುನಾವಣೆಗೆ ನಿಲ್ಲದಿದ್ದರೂ, ರಾಜಕೀಯ ನಿವೃತ್ತಿಯಾದರೂ ಅವರು ಬೇಕು. ಮುಂದಿನ ನಾಯಕತ್ವ ಬೆಳೆಸೋವರೆಗೂ ರಾಜಕಾರಣದಲ್ಲಿ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಖರ್ಗೆ ಅವರು ತೀರ್ಮಾನ ಮಾಡ್ತಾರೆ. ಕರ್ನಾಟಕ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಬೇರೆ ರಾಜ್ಯಗಳ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದ ಚರ್ಚೆ ಬಂದಾಗ ಅಭಿಪ್ರಾಯ ಹೇಳುತ್ತೇವೆ ಎಂದರು.
ನಿಮಗೆ ಗೊತ್ತೆ..? ಪುರುಷರಿಗಿಂತ ಮಹಿಳೆಯರು ಗಸಗಸೆ ತಿಂದ್ರೆ ಹೆಚ್ಚು ಲಾಭ: ಕೇಳಿದ್ರೆ ಶಾಕ್ ಆಗ್ತೀರಿ!
ನಮ್ಮ ಆಶಯ ಕೂಡ ಅದೇ ಇದೆ. ಚುನಾವಣೆಯಿಂದ ನಿವೃತ್ತಿ ಆದರೂ, ಸಕ್ರಿಯ ರಾಜಕೀಯದಲ್ಲಿ ಸಿದ್ದರಾಮಯ್ಯ ಇರಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ, ಸಿದ್ದರಾಮಯ್ಯ ಬೇಕು. ಚುನಾವಣೆ ಗೆಲ್ಲಲು ಅನಕೂಲ ಆಗುತ್ತೆ. ಇನ್ನೊಂದು ಅವಧಿಯ ವರೆಗೆ ರಾಜಕೀಯದಲ್ಲಿ ಅವರು ಇರಬೇಕು ಎಂದು ಒತ್ತಾಯಿಸಿದರು.