ಚಿತ್ರದುರ್ಗ: ಸಿದ್ಧರಾಮಯ್ಯನವರ ಸರಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಂಸದ ಗೋವಿಂದ ಕಾರಜೋಳ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೂಂಡಾಗಳಿಗೆ ಪ್ರೋತ್ಸಾಹ ನೀಡುವ ಕೆಟ್ಟ ಸರ್ಕಾರ ಕಾಂಗ್ರೆಸ್ ಸರ್ಕಾರವಾಗಿದೆ. ಸಿಎಂ, ಡಿಸಿಎಂ, ಹೋಮ್ ಮಿನಿಸ್ಟರ್ ನಾವು ಯಾರನ್ನೂ ಬಿಡಲ್ಲ ಅಂತಿದ್ದಾರೆ. ಆದರೆ ಅದನ್ನು ಸಾಬೀತು ಮಾಡಿ ತೋರಿಸಲಿ, ಗಲಾಟೆ ಮಾಡಿದವರು 1000 ಜನ ಅಂತಾ FIR ಹೇಳುತ್ತೆ. ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾದ್ರೂ ತಿಣುಕಾಡಿ 13 ಜನರನ್ನು ಅರೆಸ್ಟ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು. ಉದಯಗಿರಿ ಘಟನೆ ಸಂಬಂಧ ಒಂದು ಜೈಲು ತುಂಬುವಷ್ಟು ಜನರನ್ನು ಬಂಧಿಸಬೇಕಿತ್ತು . ಕಾಂಗ್ರೆಸ್ ಗೆ ಆಡಳಿತ ನಡೆಸಲು ಯೋಗ್ಯತೆ ಇಲ್ಲದ ಸರ್ಕಾರ ಎಂದು ಕಿಡಿಕಾರಿದರು.
ಸ್ವಾತಂತ್ರಾನಂತರ ದೇಶವನ್ನು 60 ವರ್ಷ ಕಾಂಗ್ರೆಸ್ ಆಳಿದೆ. ಕುರ್ಚಿಗೆ ಕಂಟಕ ಬಂದಾಗ, ಜನರ ಅವರಿಂದ ದೂರವಾದಾಗ ಇಂಥ ಹೊಸ ನಾಟಕ ಮಾಡ್ತಾರೆ. ನಾವು ಸಣ್ಣವರಿದ್ದಾಗ ಹಳ್ಳಿಯಲ್ಲಿ ಸಣ್ಣಾಟ, ಬಯಲಾಟ ಅಂತಾ ನಡೀತಿದ್ದವು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಾಟಕ ಕಪನಿ ಇದ್ದಂತೆ, 25 ಸಾವಿರ ಕೊಟಿ ಎಸ್ಸಿ, ಎಸ್ಟಿ ಹಣ ದುರುಪಯೋಗ ಮಾಡಿಕೊಂಡ್ರು , ಈ ಬಜೆಟ್ ನಲ್ಲಿ ದಲಿತರ 25 ಸಾವಿರ ಕೋಟಿ ಹಣ ನೀಡಿ ಎಂದು ಕಿಡಿಕಾರಿದರು.
ರಾಜ್ಯದಲ್ಲಿ 9 ವಿಶ್ವವಿದ್ಯಾಲಯಗಳ ಮುಚ್ಚುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಾದ 9 ವಿವಿಗಳ ಬಾಗಿಲು ಹಾಕ್ತಿದ್ದಾರೆ . 100 ಎಕರೆ ಜಮೀನು ಕೊಡಕ್ಕಾಗಲ್ಲ ಅಂತಾ ಹೇಳುತ್ತಿದ್ದಾರೆ. ಸರ್ಕಾರದ ಆರ್ಥಿಕ ದಿವಾಳಿಗೆ ಇದು ಕೈಗನ್ನಡಿ ಇದ್ದಂತೆ ಎಂದು ವಾಗ್ದಾಳಿ ನಡೆಸಿದರು.