ಹಾಸನ : ಈ ಸರ್ಕಾರ ನನಗೆ ಏನೂ ಮಾಡೋಕಾಗಲ್ಲ ಅಂತಾ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ತಮ್ಮ ವಿರುದ್ದದ ಭೂಕಬಳಿಕೆ ಆರೋಪ ಕುರಿತು ಮಾತನಾಡಿದ ಅವರು, ರಾಮನಗರದಲ್ಲಿ ಅವನ್ಯಾರೋ ಸಾಮಾಜಿಕ ಪರಿವರ್ತನೆಕಾರ ಎಸ್.ಆರ್.ಹಿರೇಮಠ್ ರಿಪೋರ್ಟ್ ಮೇಲೆ ಆಗಿರುವ ಕೇಸ್ ಅದು. ಸಿದ್ದಪ್ಪ ಅವತ್ತು ರಾಮನಗರದಲ್ಲಿ ಅಸಿಸ್ಟೆಂಟ್ ಕಮಿಷನರ್. ಅವನು ಒಂದು ವರದಿ ಕೊಟ್ಟ, ಅದನ್ನು ಇಟ್ಕೊಂಡು ಈ ಆಟ ಆಡುತ್ತಿದ್ದಾರೆ. ಯಡಿಯೂರಪ್ಪ ಕಾಲದಲ್ಲೂ ತನಿಖೆ ಮಾಡಿದ್ರು ಏನು ಸಿಗಲಿಲ್ಲ. ಎಲ್ಲರ ಕಾಲದಲ್ಲೂ ನಡೆಯುತ್ತಲೇ ಇದೆ. ಕಷ್ಟಪಟ್ಟು ಸಂಪದಾನೆ ಮಾಡಿದ್ದಕ್ಕೆ ಇದು ಪರಿಸ್ಥಿತಿ. ಲೂಟಿ ಹೊಡೆದು ಇವರೆಲ್ಲ ಮಾಡಿಕೊಂಡಿದ್ದಾರಲ್ಲಾ ಅದನ್ನು ಕೇಳೋರೇ ಇಲ್ಲ, ಯಾರು ಹೆದರಿಕೊಳ್ಳುತ್ತಾರೆ ಬ್ರದರ್ ಇದಕ್ಕೆಲ್ಲಾ, ನೋಡಿಲ್ವ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರು ಗಲಭೆ ಪ್ರಕರಣ ಸಂಬಂಧ ಮಾತನಾಡಿ, ಮೈಸೂರು ಗಲಭೆ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ಕೊಡುವುದು ಬೇಡ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಒಂದು ಸಮಾಜದವರು ಸೋಷಿಯಲ್ ಮಿಡೀಯಾದಲ್ಲಿ ಪೋಸ್ಟ್ ಮಾಡಿದ್ದರಿಂದ ಇನ್ನೊಂದು ಸಮಾಜದವರು ಸರ್ಕಾರಿ ವಾಹನಗಳ ಕಲ್ಲು ತೂರಾಟ ಮಾಡಲು ಹೊರಟಿದ್ದರು. ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದ್ದರು. ಅದರ ಹಿನ್ನೆಲೆಯಲ್ಲಿ ಈಗ ರಾಜಕೀಯ ಪ್ರಾರಂಭವಾಗಿದೆ. ರಾಜ್ಯದಲ್ಲಿ ಯಾವ ಪರಿಸ್ಥಿತಿಯಲ್ಲಿ ಹೋಗುತ್ತಿದ್ದೇವೆ ಅದರ ಬಗ್ಗೆ ಗಮನ ಕೊಡುವುದು ಸೂಕ್ತ ಎಂದರು.
ಇನ್ನೂ ರಾಜ್ಯ ಸರ್ಕಾರದ ತೆರಿಗೆ ಸಂಗ್ರಹ 1 ಲಕ್ಷದ 89 ಸಾವಿರ ಕೋಟಿ ನಿರೀಕ್ಷೆ ಇಟ್ಟಿದ್ದರು. ಇನ್ನೂ ಹದಿನೈದು ಸಾವಿರ ಕೊರತೆ ಆಗಬಹುದು. ಆ ಹಣ ತುಂಬಿಸಲು ಸಿಎಲ್-2, ಸಿಎಲ್-7, ಸಿಲ್-9 ಐನೂರು ಮದ್ಯದಂಗಡಿಗಳಿಗೆ ಅನುಮತಿ ಕೊಡಲು ಮುಂದಾಗಿದ್ದಾರೆ. 1992 ರಿಂದ ಇಲ್ಲಿಯವರೆಗೆ ಕೊಟ್ಟಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದಾರೆ ಎಂದರು.