ಬೆಂಗಳೂರು: ಕೋರ್ಟ್ ನಲ್ಲಿ ವಾರೆಂಟ್ ಅಗಿದ್ರು ತಲೆ ಮರೆಸಿಕೊಂಡಿದ್ದ ಆರೋಪಿಯು 9 ವರ್ಷಗಳ ನಂತರ ಸಿಕ್ಕಿಬಿದ್ದರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಅಬ್ದುಲ್ ಫಾರೂಕ್ ಬಂಧಿತ ಆರೋಪಿಯಾಗಿದ್ದು, ಮಹಮ್ಮದ್ ಫಾರೂಕ್ ತನ್ನ ತಂದೆ ತೀರಿಹೋದಗಲೂ ಕೂಡ ಅಂತ್ಯಕ್ರಿಯೆಗೆ ಬಂದಿರಲಿಲ್ಲ. ಪೊಲೀಸರು ಮಹಮ್ಮದ್ ಫಾರೂಕ್ ಗಾಗಿ ತುಂಬಾ ಹುಡುಕಾಟ ನಡೆಸಿದ್ರು.
ಮೊಬೈಲ್ ನಂಬರ್ ಕೂಡ ಅಕ್ಟೀವ್ ಇಲ್ಲ ಅತ ತನ್ನ ಸೋಷಿಯಲ್ ಮೀಡಿಯಾವನ್ನ ಕೂಡ ಬಳಸ್ತಿರಲಿಲ್ಲ. ಆದರೆ ಮಗ ಅಪ್ಪನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಟೊವೇ ಇದೀಗ ಮುಳುವಾಯ್ತು.
Shani Dev: ಮನೆಯಲ್ಲಿ ಶನಿ ವಿಗ್ರಹ ಏಕೆ ಇರಬಾರದು ಗೊತ್ತಾ..? ಹಿಂದಿನ ರಹಸ್ಯವೇನು..? ಇಲ್ಲಿದೆ ಉತ್ತರ
ಹೌದು ಇತ್ತೀಚೆಗೆ ಇನ್ಸ್ಟಾಗ್ರಾಂ ಸ್ಟೋರಿಯೊಂದರಲ್ಲಿ ಮೊಹಮ್ಮದ್ ಫಾರೂಕ್ನ ಫೋಟೋ ಪ್ರಕಟಿಸಲಾಗಿತ್ತು. ಫೋಟೋ ಪ್ರಕಟವಾದ ಇನ್ಸ್ಟಾಗ್ರಾಂ ಐಡಿ, ಐಪಿ ಅಡ್ರೆಸ್ ಪರಿಶೀಲನೆ ನಡೆಸಿದಾಗ ಅದು ಮೊಹಮ್ಮದ್ ಫಾರೂಕ್ನ ಹೆಸರಿನಲ್ಲಿರುವ ಮೊಬೈಲ್ ನಂಬರ್ನ ಆಧಾರದಲ್ಲಿ ಆ ಐಡಿ ಕ್ರಿಯೇಟ್ ಆಗಿರುವುದು ಪತ್ತೆಯಾಗಿತ್ತು.
ಅಲ್ಲದೇ ಅದೇ ನಂಬರ್ನಿಂದ ಆನ್ಲೈನ್ನಲ್ಲಿ ಫುಡ್ ಆರ್ಡರ್ ಬಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆ ಆರ್ಡರ್ಗಳು ಪ್ಲೇಸ್ಮೆಂಟ್ ಆಗುತ್ತಿದ್ದ ಮಾಹಿತಿ ಆಧಾರದಲ್ಲಿ ಮೊಹಮ್ಮದ್ ಫಾರೂಕ್ನ ವಿಳಾಸವನ್ನ ಪೊಲೀಸರು ಪತ್ತೆಹಚ್ಚಿದ್ದರು.
ಮಹಮ್ಮದ್ ಫಾರೂಕ್ ಮಗನಾ ಸೋಷಿಯಲ್ ಮಿಡಿಯಾ ಐಪಿ ಅಡ್ರೆಸ್ ತೆಗೆದು ಟ್ರೆಸ್ ಮಾಡಿದ್ದಾರೆ. ಮಕ್ಕಳನ್ನ ಸ್ಕೂಲ್ ಗೆ ಬಿಡಲು ಬರುತ್ತಿದ್ದನು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನಿಗಾಗಿ ಕಾದು ಕುಳಿತಿದ್ದರು. ಮಡಿವಾಳ ಇನ್ಸ್ಪೆಕ್ಟರ್ ಮೊಹಮ್ಮದ್ ನೇತೃತ್ವದ ತಂಡ ದಾಳಿ ನಡೆಸಿ ಇದೀಗ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮಹಮ್ಮದ್ ಫಾರೂಕ್ ನನ್ನು ಬಂಧಿಸಿದ್ದಾರೆ.