ತುಮಕೂರು : ಗೃಹ ಸಚಿವರ ತೇಜೋವಧೆ ಮಾಡುವಂತೆ ಏಕವಚನದಲ್ಲಿ ಮಾತನಾಡಬಾರದು ಅಂತಾ ಸಚಿವ ಕೆ.ಎನ್ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ತುಮಕೂರಿನಲ್ಲಿ ಹಾಲಿ ಮಾಜಿಗಳ ವಾಕ್ಸಮರ ವಿಚಾರವಾಗಿ ಮಾತನಾಡಿದ ಅವರು, ಇಬ್ಬರೂ ವೈಯಕ್ತಿಕವಾಗಿ ಟೀಕೆ ಮಾಡೋದು ಭೂಷಣ ಅಲ್ಲಾ. ಸುರೇಶ್ ಗೌಡ್ರು ತಾಳ್ಮೆ ಇಟ್ಟುಕೊಳ್ಳಬೇಕು.. ಗೌರಿಶಂಕರ್ ಕೂಡಾ ಪದ ಬಳಕೆಯಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಪದ ಬಳಿಸಬೇಕು. ಇಬ್ಬರು ಏಕವಚದಲ್ಲಿ ಮಾತನಾಡುವ ಕೆಲಸ ಮಾಡಬಾರದು. ಸುರೇಶ್ ಗೌಡ ಮೂರು ಬಾರಿ ಶಾಸಕರಾಗಿರೋರು. ಡಾ.ಜಿ.ಪರಮೇಶ್ವರ್ ಅವರು ಗೃಹಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ತೇಜೋವಧೆ ಮಾಡುವ ಹಾಗೆ ಮಾತನಾಡೋದು ಖಂಡನೀಯ. ಪರಮೇಶ್ವರ್ ಬಗ್ಗೆ ಆಡಿರೋ ಮಾತು ವಾಪಾಸ್ ಪಡೆಯಬೇಕು ಹಾಗೂ ಕ್ಷೇತ್ರದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಶೋಷಿತರ ಸಮಾವೇಶ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೆ ಸಿಗುವ ಹಕ್ಕು ದೊರಕಿಸಿಕೊಳ್ಳಲು ಸಂಘಟನೆ ಆಗಲು ಸಮಾವೇಶ ನಡೆಯುತ್ತೆ. 2004ರಲ್ಲಿ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು. ಆದರೆ ದೇವೇಗೌಡರು ಧರ್ಮ ಸಿಂಗ್ ಮಾಡಿದ್ರು. ಸಿದ್ದರಾಮಯ್ಯಗೂ ತಪ್ಪಿಸಿದ್ದರು.. ದೇವೇಗೌಡರ ಮುಂದಾಲೋಚನೆ ಇರುತ್ತೆ. ಧರ್ಮಸಿಂಗ್ ರನ್ನ ತೆಗೆದರು. ಖರ್ಗೆಯವರನ್ನು ತೆಗೆದರೆ ಊರು ಊರಲ್ಲಿ ಪ್ರತಿಭಟನೆ ಮಾಡುತ್ತಿದ್ದರು ಎಂದರು.
ಫೈನಾನ್ಸ್ ಕಿರುಕುಳದ ಬಗ್ಗೆ ನನಗೆ ಹಿಂದೆಯೇ ಮಾಹಿತಿ ಇತ್ತು: ಲಕ್ಷ್ಮೀ ಹೆಬ್ಬಾಳ್ಳರ್!
ಜಾತಿಗಣತಿ ವಿಚಾರವಾಗಿ ಸಮಗ್ರವಾದ ವರದಿ ಯಾರಿಗೂ ಗೊತ್ತಿಲ್ಲ. ಮುಂದಿನ ತಿಂಗಳು ಎಮ್ ಎಮ್ ಹಿಲ್ಸ್ ನಲ್ಲಿ ಮಾಡಬೇಕೆಂದು ಇದೆ. ಟರ್ಜರಿನಲ್ಲಿ ಇಡಲಾಗಿದೆ ಯಾವುದೇ ಸೋರಿಕೆಯಾಗುವುದಿಲ್ಲ. ಜಾತಿಗಣತಿ ಹಾಗೂ ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ದವಾಗಿದೆ. ತರಾತುರಿಯಲ್ಲಿ ತಪ್ಪು ಆಗಬಾರದೆಂದು ಸಮಿತಿ ಮಾಡಲಾಗಿದೆ. ಸಾಧಕಬಾದಕಗಳನ್ನ ನೋಡಿ ಜಾರಿ ಮಾಡಲಾಗುತ್ತದೆ ಎಂದರು. ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ದೇವರಾಜ್ ಅರಸ್ ರವರ ದಾಖಲೆ ಮುರಿತ್ತಾರೆ,ಇದರಲ್ಲಿ ಅನುಮಾನ ಬೇಡ ಎಂದರು.
ಹೇಮಾವತಿ ಲಿಂಕ್ ಕೆನಾಲ್ ವಿಚಾರವಾಗಿ ಮಾತನಾಡಿ, ನೀರು ಅಲ್ಲಿಗೆ ಹೋಗದ ರೀತಿಯಲ್ಲಿ ಮಾಡೊದು ಅಷ್ಟೇ. ನಾನು ಮಧುಗಿರಿ ಕ್ಷೇತ್ರದ ಶಾಸಕನಾಗಿದ್ದೇನೆ. ನನ್ನ ಜಾತಿಯ ಬ್ಲಾಕ್ ಅಧ್ಯಕ್ಷರಾಗಿ ಮಾಡಬಾರದು. ಬೇರೆ ಜಾತಿಯವರನ್ನ ಅಧ್ಯಕ್ಷರನ್ನಾಗಿ ಮಾಡಬೇಕು. ಯಾರು ವಿಧಾನಸಭೆಗೆ ಸ್ಪರ್ದೆ ಮಾಡ್ತಾರೋ ಆ ಜಾತಿಗೆ ಬಿಟ್ಟು, ಬೇರೆಯವರಿಗೆ ಕೊಡಬೇಕು. ಇದು ದೆಹಲಿ ನಾಯಕರಿಗೆ ತಿಳಿಸಲಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ವಿಚಾರವಾಗಿ ಮಾತನಾಡಿ, ದೆಹಲಿಯವರು ಪ್ರೆಸ್ ನೋಟ್ ರಿಲಿಸ್ ಮಾಡಿದ್ದಾರೆ. 18-5-23 ರಂದು ರಿಲೀಸ್ ಮಾಡಿದ್ದಾರೆ. ಅವರು ರಿಲೀಸ್ ಮಾಡಿದ್ದನ್ನ ನಾನು ಅವರ ಗಮನಕ್ಕೆ ತಂದಿದ್ದೇನೆ ಅಷ್ಟೇ. ಈ ಲೋಕಸಭಾನೋ ಅಥವಾ ಮುಂದಿನ ಲೋಕಸಭಾನೋ ತಿಳಿಸಿ ಅಂತಾ ಹೇಳಿಬಂದಿದ್ದೇನೆ. ಒನ್ ಮ್ಯಾನ್ ಒನ್ ಪೋಸ್ಟ್ ಅಂತಾ ಒಪ್ಪುತ್ತೇನೆ. ಕೆಪಿಸಿಸಿ ಕೊಟ್ಟರೇ ಸಚಿವ ಸ್ಥಾನ ಬಿಡುತ್ತೀನಿ ಎಂದರು.