ದಲಿತ ಸಚಿವರ ಡಿಮ್ಯಾಂಡ್ ಗೆ ಕಾಂಗ್ರೆಸ್ ಹೈಕಮಾಂಡ್ ಮಂಡಿಯೂರಿದಂತೆ ಕಾಣ್ತಿದೆ..ಅವರು ಇಟ್ಟ ಎಲ್ಲಾ ಬೇಡಿಕೆಗಳಿಗೂ ಸ್ಪಂದಿಸಿದಂತಿದೆ..ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ದಲಿತ ಸಮಾವೇಶ ನಡೆಸೋಕೆ ಅನುಮತಿಯನ್ನ ನೀಡಿದೆಯಂತೆ..ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಮುಂದುವರಿಕೆಯ ಬಗ್ಗೆಯೂ ಒಲವು ತೋರಿದೆ ಎನ್ನಲಾಗ್ತಿದೆ..ಆದರೆ ಕೆಲವು ಷರತ್ತುಗಳನ್ನೂ ಹಾಕಿದೆಯಂತೆ..ಏನದು ಅಂತೀರ..ಈ ಸ್ಟೋರಿ ನೋಡಿ..
ರಾಜ್ಯ ಕಾಂಗ್ರೆಸ್ ನೊಳಗಿನ ಆಂತರಿಕ ಅಸಮಾಧಾನಗಳು ದೆಹಲಿ ವರಿಷ್ಠರ ಕಿವಿಗೆ ಬಿದ್ದಿವೆ..ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್.ರಾಜಣ್ಣ ಇಂಚಿಂಚೂ ಮಾಹಿತಿಯನ್ನ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ..ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯಬದಲಾವಣೆ ಮಾಡಿದ್ರೆ ಏನಾಗಲಿದೆ,ಅಹಿಂದ ಸಮುದಾಯಗಳ ಮತಬ್ಯಾಂಕ್ ಗಟ್ಟಿಗೊಳಿಸೋಕೆ ಏನುಮಾಡ್ಬೇಕು..
ಕೆಪಿಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನ ಯಾಕೆ ಮಾಡಬೇಕೆಂಬ ಬಗ್ಗೆ ಸುಧೀರ್ಘವಾಗಿ ವಿವರಿಸಿದ್ದಾರೆ..ದಲಿತ ಸಮಾವೇಶ ನಡೆಸೋಕೆ ಹೊರಟಿದ್ದು,ಅದನ್ನ ತಪ್ಪಾಗಿ ಅರ್ಥೈಸಿಕೊಂಡು ನಿಲ್ಲಿಸಿದ್ದರ ಬಗ್ಗೆಯೂ ಗಮನಸೆಳೆದಿದ್ದಾರೆ..ಅಲ್ಲಿಂದ ವಾಪಸ್ ಆದ್ಮೇಲೆ ಇವತ್ತು ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ..ದೆಹಲಿಯಲ್ಲಿ ವರಿಷ್ಟಾರ ಜೊತೆ ನಡೆದ ಮಾತುಕತೆಯ ಬಗ್ಗೆ ಡಿಟೇಲ್ಸ್ ಕೊಟ್ಟಿದ್ದಾರೆ..ನಿಮ್ಮ ಮುಂದುವರಿಕೆಯ ಬಗ್ಗೆಯೂ ಸಂಪೂರ್ಣ ವಿವರಣೆ ನೀಡಿದ್ದೇವೆ..ಎಲ್ಲದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಮಾಹಿತಿ ನೀಡಿದ್ದಾರೆ…
Shani Dev: ಮನೆಯಲ್ಲಿ ಶನಿ ವಿಗ್ರಹ ಏಕೆ ಇರಬಾರದು ಗೊತ್ತಾ..? ಹಿಂದಿನ ರಹಸ್ಯವೇನು..? ಇಲ್ಲಿದೆ ಉತ್ತರ
ಇನ್ನು ಕೆ.ಎನ್.ರಾಜಣ್ಣ ವರಿಷ್ಟರನ್ನ ಭೇಟಿ ಮಾಡಿ ದೆಹಲಿಯಲ್ಲೇ ಉಳಿದಿದ್ರೆ,ಇತ್ತ ವಾಪಸ್ ಆಗಿರುವ ಸತೀಶ್ ಜಾರಕಿಹೊಳಿ ಕಾವೇರಿಯಲ್ಲಿ ಸಿಎಂ ಭೇಟಿ ಮಾಡಿದ್ರು..ಸಿಎಂ ಭೇಟಿ ವೇಳೆ ಮತ್ತೋರ್ವ ದಲಿತ ಸಚಿವ ಹೆಚ್.ಸಿ.ಮಹದೇವಪ್ಪ ಕೂಡ ಸಾಥ್ ನೀಡಿದ್ರು..ಇಬ್ಬರು ದಲಿತ ಸಚಿವರ ಜೊತೆ ಸಿಎಂ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ..ಸಿಎಂ ಆರೋಗ್ಯ ವಿಚಾರಣೆ ನೆಪದಲ್ಲಿ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದ್ದಾರೆ..
ಈವೇಳೆ ಸಿಎಂ ಕೂಡ ದಲಿತ ಸಚಿವರಿಗೆ ಟಾಸ್ಕ್ ಕೊಟ್ಟಿದ್ದಾರಂತೆ..ಎಲ್ಲರೂ ನನ್ನ ಪರವಾಗಿ ನಿಲ್ಲಬೇಕು..ಪೂರ್ಣಾವಧಿ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು,ಶಾಸಕರ ಸಂಪೂರ್ಣ ಬೆಂಬಲವೂ ನನಗೆ ಸಿಗಲಿದೆ..ನೀವು ಒಟ್ಟು ನನ್ನ ಪರವಾಗಿರಿ ಎಂದು ಹೇಳಿದ್ದಾರಂತೆ..ಖರ್ಗೆ ವೇಣುಗೋಪಾಲ್ ಬಳಿ ನಿಮ್ಮನ್ನೇ ಮುಂದುವರಿಸಬೇಕು..ಇಲ್ಲವಾದರೆ ಸರ್ಕಾರಕ್ಕೆ ಆಪತ್ತು ಅನ್ನೋದನ್ನ ಗಮನಕ್ಕೆ ತಂದಿದ್ದೇವೆಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ..ಇವರ ಮಾತು ಕೇಳಿ ಸಿಎಂ ಫುಲ್ ಖುಷ್ ಆಗಿದ್ದಾರೆ ಎನ್ನಲಾಗ್ತಿದೆ..
ಇನ್ನು ದಲಿತ ಸಮಾವೇಶ ಮಾಡಬೇಕೆಂದು ಹೊರಟಿದ್ದ ಸಚಿವರಿಗೆ ಹಿನ್ನಡೆಯಾಗಿತ್ತು..ವ್ಯಕ್ತಿಗತ ಬಲಪ್ರದರ್ಶನವಾಗುತ್ತೆ ಅನ್ನೋ ಕಾರಣಕ್ಕೆ ಡಿಕೆಶಿ ಅದಕ್ಕೆ ಹೈಕಮಾಂಡ್ ಮೂಲಕಕಡಿವಾಣ ಹಾಕಿಸಿದ್ರು..ಆದ್ರೆ ಮೂರು ದಿನಗಳ ಕಾಲ ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದ ಸಚಿವ ಕೆ.ಎನ್.ರಾಜಣ್ಣ ಮಲ್ಲಿಕಾರ್ಜುನ ಖರ್ಗೆ ಹಾಗೂ ವೇಣುಗೋಪಾಲ್ ಮನವೊಲಿಸಿದ್ದಾರೆ..ಅಹಿಂದ ಸಮುದಾಯಗಳ ಒಗ್ಗಟ್ಟಿಗೆ ಸಮಾವೇಶಗಳ ಅಗತ್ಯವಿದೆ..
ಕಾಂಗ್ರೆಸ್ ಬೆನ್ನಿಗೆ ನಿಂತಿರುವುದೇ ಅಹಿಂದ ಸಮುದಾಯಗಳು..ಶೇ ೮೦ ರಷ್ಟು ಲಿಂಗಾಯತರು ಬಿಜೆಪಿ ಕಡೆ ಇದ್ರೆ,೬೦% ಒಕ್ಕಲಿಗರು ದೇವೇಗೌಡರ ಕಡೆ ಇದ್ದಾರೆ..ಹಾಗಾಗಿ ನಮಗೆ ಅಹಿಂದ ಮತಗಳೇ ಅನಿವಾರ್ಯ ಅನ್ನೋದನ್ನ ರಾಜಣ್ಣ ಒತ್ತಿ ಒತ್ತಿ ಹೇಳಿದ್ದಾರಂತೆ..ಮೊನ್ನೆ ಸತೀಶ್ ಜಾರಕಿಹೊಳಿ ಕೂಡ ಇದೇ ಡಿಮ್ಯಾಂಡ್ ಇಟ್ಟಿದ್ದರಂತೆ..ಇದ್ರ ನಡುವೆ ಬೆಂಗಳೂರಿನಲ್ಲಿ ಖರ್ಗೆ ಭೇಟಿಮಾಡಿದಾಗಲೂ ಪರಮೇಶ್ವರ್ ಇದನ್ನಗಮನಕ್ಕೆ ತಂದಿದ್ದರಂತೆ..ಇದೆಲ್ಲದರ ಪರಿಣಾಮ ದಲಿತ ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿದೆಯಂತೆ..ಆದರೆ ಪಕ್ಷದ ವೇದಿಕೆಯಲ್ಲೇ ನಡೆಸಬೇಕು ಅನ್ನೋ ಷರತ್ತು ಇಟ್ಟಿದೆಯಂತೆ..