ಕೊಪ್ಪಳ:- ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ರೆಸಾರ್ಟ್ಗಳು ಆರಂಭವಾಗಿದ್ದು, ಬಹುತೇಕ ರೆಸಾರ್ಟ್ಗಳು ಅನಧಿಕೃತವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತೀವೆ.
ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ!
ಬಿದಿರಿನಿಂದ ಮಾಡಿರೋ ಹಟ್ ಗಳು, ಇನ್ನೊಂದಡೆ ಪ್ರವಾಸಿಗರನ್ನು ಆಕರ್ಷಿಸುತ್ತಿರೋ ವಿಭಿನ್ನ ಬಗೆಯ ರೆಸ್ಟೋರೆಂಟ್ ಗಳು. ಇಲ್ಲಿ ಟೆಂಟ್ ಹೌಸ್ ಸೇರಿದಂತೆ ಆನಂದದಾಯಕವಾಗಿ ಕಾಲ ಕಳೆಯಲು ಎಸಿ ಕೊಠಡಿಗಳು ಕೂಡ ಸಿಗುತ್ತವೆ. ಈ ದೃಶ್ಯಗಳು ಕಂಡು ಬಂದಿರೋದು ಕೊಪ್ಪಳದಲ್ಲಿ.
ತಾಲೂಕಿನ ಬಸ್ಸಾಪುರ, ಗಂಗಾವತಿ ತಾಲೂಕಿನ ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಇದೀಗ ರೆಸಾರ್ಟ್ಗಳ ಹಾವಳಿ ಹೆಚ್ಚಾಗಿದೆ. ಒಂದಕ್ಕಿಂತ ಒಂದು ಭಿನ್ನ ರೆಸಾರ್ಟ್ಗಳು ಆರಂಭವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಈ ಭಾಗದಲ್ಲಿ ಇದೀಗ ಆರವತ್ತಕ್ಕೂ ಹೆಚ್ಚು ರೆಸಾರ್ಟ್ ಗಳು ತಲೆ ಎತ್ತಿವೆ.
ಈ ಹಿಂದೆ ಜಿಲ್ಲೆಯ ವಿರುಪಾಪುರ ಗಡ್ಡಿಯನ್ನು ಮಿನಿ ಗೋವಾ ಅಂತಲೆ ಕರೆಯಲಾಗುತ್ತಿತ್ತು. ಆದರೆ ಹಂಪಿ ಅಭಿವೃದ್ದಿ ಪ್ರಾಧಿಕಾರದಲ್ಲಿದ್ದಿದ್ದರಿಂದ ಅಲ್ಲಿನ ರೆಸಾರ್ಟ್ ಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಹಂಪಿ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಹೊರಗೆ ರೆಸಾರ್ಟ್ ಗಳು ತಲೆ ಎತ್ತಿವೆ. ಕೃಷಿ ಭೂಮಿಯನ್ನು ಗುತ್ತಿಗೆ, ಖರೀದಿ ಪಡೆಯುತ್ತಿರುವ ಅನೇಕರು, ರೆಸಾರ್ಟ್ ಗಳನ್ನು ಆರಂಭಿಸುತ್ತಿದ್ದಾರೆ. ಆದರೆ ಬಹುತೇಕ ರೆಸಾರ್ಟ್ ಗಳು ಅನಧಿಕೃತವಾಗಿ ತಲೆ ಎತ್ತುತ್ತಿವೆ. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.