ಬೆಂಗಳೂರು:– ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರೋದು ಗೊತ್ತಿರುವ ವಿಚಾರ. ರಾಜಧಾನಿಯ ಬೀದಿನಾಯಿಗಳಿಗೆ ರೋಗಗಳು ಹರಡದಂತೆ ಕ್ರಮವಹಿಸೋಕೆ ಹೊರಟಿರೋ ಪಾಲಿಕೆ ಬರೋಬ್ಬರಿ 4.98 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಬೈನ್ಡ್ ವ್ಯಾಕ್ಸಿನ್ ಕೊಡಿಸೋಕೆ ಹೊರಟಿದೆ. ಇತ್ತ ಬೀದಿನಾಯಿಗಳಿಗೆ ಈ ಲಸಿಕೆ ಕೊಡೋಕೆ ಮುಂದಾಗಿದ್ದು ಲಸಿಕೆ ಅಭಿಯಾನಕ್ಕೆ ಇಂದು ಚಾಲನೆ ಸಿಕ್ಕಿದೆ.
ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಉಲ್ಬಣ: ಒಂದೇ ದಿನ ನಾಲ್ಕು ಮಂದಿಗೆ ದೃಢ!
ಬೀದಿನಾಯಿಗಳಿಂದ ಹರಡುವ ರೋಗಗಳಿಗೆ ಕಡಿವಾಣ ಹಾಕಲು ಹೊರಟಿರೋ ಪಾಲಿಕೆ ಇದೀಗ ಹೊಸ ಪ್ಲಾನ್ ಜಾರಿ ಮಾಡೋಕೆ ಹೊರಟಿದೆ. ಪಾಲಿಕೆ ವ್ಯಾಪ್ತಿಯ 1.84 ಲಕ್ಷ ಬೀದಿನಾಯಿಗಳಿಗೆ ಕಂಬೈನ್ಡ್ ವ್ಯಾಕ್ಸಿನ್ ನೀಡೋಕೆ ಹೊರಟಿರೋ ಪಾಲಿಕೆ, ಇದಕ್ಕಾಗಿ ಬರೋಬ್ಬರಿ 4.98 ಕೋಟಿ ರೂಪಾಯಿ ಖರ್ಚು ಮಾಡೋಕೆ ಮುಂದಾಗಿದೆ.
ಪಾಲಿಕೆ ಇದೀಗ ಬೀದಿನಾಯಿಗಳಿಗೆ ರೋಗ ಹರಡದಂತೆ ನಿಗಾ ಇಡುವುದಕ್ಕೆ ಹೊರಟಿದೆ. ಸದ್ಯ ಬಿಬಿಎಂಪಿಯ ಈ ಹೊಸ ಯೋಜನೆಗೆ ಇಂದು ಚಾಲನೆ ನೀಡಿರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈ ಪ್ಲಾನ್ ನಿಂದ ನಾಯಿಗಳಿಗೆ ಹರಡುವ ರೋಗ ಹಾಗೂ ನಾಯಿಗಳಿಂದ ಮನುಷ್ಯರಿಗೆ ಹರಡುವ ರೋಗಗಳಿಗೆ ಈ ಲಸಿಕೆ ಬ್ರೇಕ್ ಹಾಕಲಿದೆ ಅಂದಿದ್ದಾರೆ.