ಹುಬ್ಬಳ್ಳಿ : ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಕಾಣೆಯಾಗಿದ್ದು, ಈ ಸಂಬಂಧ ಕುಂದಗೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಮಾನಸಿಕ ಅಸ್ವಸ್ಥನಾಗಿ ಅಲ್ಲಲ್ಲಿ ಓಡಾಡಿಕೊಂಡಿದ್ದ ಗ್ರಾಮದ ಮಲ್ಲಿಕಾರ್ಜುನಪ್ಪ ತಂದೆ ರಾಮಪ್ಪ ಮೇಟಿ ವಯಾ 55 ಈತ ಕಾಣೆಯಾಗಿದ್ದಾನೆ. ಇತನ ಚಹರೆ ಎತ್ತರ 5 ಪೂಟ 8 ಇಂಚು, ಸಾದಗಪ್ಪು ಮೈಬಣ್ಣ, ಸದೃಡವಾಗಿ ತೆಳ್ಳಗೆ ಉದ್ದನೆಯ ಮುಖ,ನೀಟಾದ ಮೂಗು,ಕಪ್ಪು ಬಿಳಿ ತಲೆಯಲ್ಲಿ ಕೂದಲು,ಇದ್ದು ಬಿಳಿ ಬಣ್ಣದ ಶರ್ಟ,ಹಾಗೂ ಬಿಳಿ ಬಣ್ಣದ ದೋತರ ಧರಿಸಿ ಹೋಗಿದಗದು ಇರುತ್ತದೆ. ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಕುಂದಗೋಳ ಪೋಲಿಸ್ ಠಾಣೆ ಅಧಿಕಾರಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.