ಕುಂದಗೋಳ : 2023-24 ಸಾಲಿನ ಮುಂಗಾರು ಹಿಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ ) ಯೋಜನೆಯಡಿ ವಿಮಾ ಸಂಸ್ಥೆಯಿಂದ 1746 ಪ್ರಸ್ತಾವನೆಗಳು ತಿರಸ್ಕೃತಗೊಂಡಿವೆ. ಮುಂಗಾರು 576 ಇಂಗಾರು 1169 ಹಾಗೂ ಬೇಸಿಗೆ 01 ಸೇರಿ ಒಟ್ಟು 1746 ಪ್ರಸ್ತಾವನೆಗಳು ತಿರಸ್ಕೃತಗೊಂಡಿವೆ.
ತಿರಸ್ಕೃತ ಗೊಂಡಿರುವ ಬೆಳೆ ವಿಮೆ ಪ್ರಸ್ತಾವನೆಗಳ ರೈತರ ಪಟ್ಟಿಯನ್ನು ಗ್ರಾಮ ಪಂಚಾಯತ್, ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಲಾಗಿದೆ ಸಂಬಂಧಪಟ್ಟ ರೈತರು ಆಕ್ಷೇಪಣೆ ಇದ್ದಲ್ಲಿ ಫೆಬ್ರವರಿ 27 ನೇ ದಿನಾಂಕ ಒಳಗಾಗಿ ರೈತ ಸಂಪರ್ಕ ಕೇಂದ್ರ ಕುಂದುಗೋಳ ಹಾಗೂ ಸಂಶಿ ಕಚೇರಿಗೆ,
ನಿಮಗೆ ಗೊತ್ತೆ..? ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ ಪಕ್ಕಾ ಹೆಲ್ಪ್ ಮಾಡುತ್ತೆ..!
1) 2023- 24ರ ಪಹಣಿ ಪತ್ರಿಕೆಯಲ್ಲಿ (ಆರ್ ಟಿ ಸಿ ) ನಿಮಗೆ ನೋಂದಾಯಿಸಿದ ಬೆಳೆ ನಮೂದು ಪ್ರತಿ ಅಥವಾ 2.ವಿಮೆ ಮಾಡಿಸಿದ ಬೆಳಗೆ ಬೆಂಬಲ ಬೆಲೆ ಪ್ರಯೋಜನ ಪಡೆದಲ್ಲಿ ರಶೀದಿ ಅಥವಾ 3.ವಿಮಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ದಾಖಲೆಯೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಭಾರತೀ ಮೆಣಸಿನಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.