ಗದಗ:- ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಶೆಡ್ ನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಎರಡು ಆಕಳು ಹಾಗೂ ಕರು ಸುಟ್ಟುಕರಕಲಾದ ಘಟನೆ ಜರುಗಿದೆ.
ತೆಂಗಿನ ಎಣ್ಣೆ ಹೀಗೆ ಬಳಸಿ: ಮೊಣಕಾಲುದ್ದ ಕೇಶರಾಶಿ ನಿಮ್ಮದಾಗುತ್ತೆ..! 100% ರಿಸಲ್ಟ್!
ನವೀನ ನವಲೆ ಎನ್ನುವ ರೈತನಿಗೆ ಸೇರಿದ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿ ಕೊಳ್ಳುತ್ತಿದ್ದಂತೆ ಎರಡು ಆಕಳು, ಒಂದು ಕರು ಸಾವನ್ನಪ್ಪಿದೆ. ಅಲ್ಲದೇ ಎರಡು ಟ್ರ್ಯಾಕ್ಟರ್ ಹೊಟ್ಟು, 10 ಚೀಲ್ ಈರುಳ್ಳಿ, ಹಾಗೂ ಶೆಡ್ ಬೆಂಕಿಗಾಹುತಿಯಾಗಿದೆ.
ಘಟನೆಯಿಂದ ಸುಮಾರು 25 ಲಕ್ಷಕ್ಕೂ ಹೆಚ್ಚು ಹಾನಿ ಆಗಿದ್ದು, ರೈತ ಕುಟುಂಬ ಕಂಗಾಲಾಗಿದೆ.