ಬೆಂಗಳೂರು:– ರಜತ್ ಪಾಟಿದಾರ್ ಅವರನ್ನು RCB ನೂತನ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ನೂತನ ಕ್ಯಾಪ್ಟನ್ ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಸಂದೇಶ ರವಾನಿಸಿದ್ದಾರೆ.
ರಜತ್ ಪಾಟಿದಾರ್ ನಾಯಕನಾಗಿ ಆಯ್ಕೆಗೊಳ್ಳುತ್ತಿದ್ದಂತೆ ಮಾಜಿ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ. ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ರಜತ್ ನಾಯಕ ಸ್ಥಾನಕ್ಕೆ ಅರ್ಹರಾಗಿದ್ದಾರೆ. ನಾನು ಮತ್ತು ಆರ್ಸಿಬಿ ತಂಡ ಸದಾ ರಜತ್ ಅವರಿಗೆ ಬೆಂಬಲ ನೀಡುತ್ತೇವೆ. ಆರ್ಸಿಬಿ ನಿಮಗೆ ನಾಯಕನ ದೊಡ್ಡ ಜವಾಬ್ದಾರಿ ನೀಡಿದೆ. RCB ಅಭಿಮಾನಿಗಳು ಕೂಡ ನೂತನ ನಾಯಕನಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕೊಹ್ಲಿಯ ಈ ಮಾತು ಆರ್ಸಿಬಿ ಅಭಿಮಾನಿಗಳ ಮನ ಗೆದ್ದಿದೆ.
ಸಮಾನ್ಯವಾಗಿ ವಿರಾಟ್ ಕೊಹ್ಲಿ ಯುವ ಆಟಗಾರರನ್ನು ಪ್ರೋತ್ಸಾಹಿಸುವಲ್ಲಿ ಸದಾ ಮುಂದಿರುತ್ತಾರೆ. ಇದೀಗ ಪಾಟಿದಾರ್ಗೂ ಬೆಂಬಲ ನೀಡಿ ಮತ್ತು ತಮ್ಮ ಅಭಿಮಾನಿಗಳಿಗೂ ಬೆಂಬಲ ನೀಡುವಂತೆ ಕೋರಿದ್ದು ಇದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಈ ವರೆಗೂ ಆರ್ಸಿಬಿ ತಂಡದ ಪರ ರಜತ್ ಪಾಟಿದಾರ್ ಒಟ್ಟು 27 ಪಂದ್ಯಗಳನ್ನಾಡಿದ್ದಾರೆ. 24 ಇನ್ನಿಂಗ್ಸ್ಗಳಲ್ಲಿ 34.74ರ ಸರಾಸರಿಯಲ್ಲಿ ಒಟ್ಟು 779 ರನ್ ಕಲೆ ಹಾಕಿದ್ದಾರೆ. ಅದರಲ್ಲಿ 1 ಶತಕ, 7 ಅರ್ಧಶತಕ ಸೇರಿವೆ. 112ರನ್ ಐಪಿಎಲ್ನಲ್ಲಿ ಇವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.