ಕೋಲಾರ – ಪತ್ರಕರ್ತನಾದವನು ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು ಹಾಗೂ ವಿಷಯದಲ್ಲಿನ ಸತ್ಯಾಸತ್ಯತೆಗಳ ಬಗ್ಗೆ ಪರಾಮರ್ಷೆ ಮಾಡುತ್ತಿರಬೇಕು ಎಂದು ಮಾನ್ಯ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ತಿಳಿಸಿದರು.
ಆರ್ಸಿಬಿ ಪರ ಆಡಲು ನಾನು ಅದೃಷ್ಟಶಾಲಿ ಆಗಿದ್ದೇನೆ: ನೂತನ ಕ್ಯಾಪ್ಟನ್ ರಜತ್ ಪಾಟಿದಾರ್!
ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ, ಕೋಲಾರ ಪತ್ರಿಕೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕೋಲಾರ ಪತ್ರಿಕೆ ಸುವರ್ಣ ಸಂಭ್ರಮದ ಅಂಗವಾಗಿ ಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಇಂದು-ಮುಂದು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪತ್ರಿಕೋದ್ಯಮವು ವಿಶ್ವಾಸಾರ್ಹ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು. ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಮಾರಕವಾಗಿದ್ದು, ಕಳವಳಕಾರಿಯಾಗಿ ಬೆಳೆಯುತ್ತಿದೆ. ಕರೋನ ನಂತರದಲ್ಲಿ ಪತ್ರಿಕೋದ್ಯಮ ಇತ್ತೀಚಿಗೆ ಚೇತರಿಸಿಕೊಳ್ಳುತ್ತಿದೆ. ಮುದ್ರಣ ಮಾಧ್ಯಮಗಳು ಎಲೆಕ್ಟಾçನಿಕ್ ಮಾಧ್ಯಮಗಳ ಅಬ್ಬರದ ಹೊರತಾಗಿಯೂ, ವಿಶ್ವಾಸಾರ್ಹ ಸುದ್ಧಿಗಳನ್ನು ನೀಡುವಲ್ಲಿ ಹಾಗೂ ಓದುಗರ ಮನಗೆಲ್ಲುವಲ್ಲಿ ಮೇಲುಗೈ ಸಾಧಿಸಿದೆ. ಇದರೊಂದಿಗೆ ಮುದ್ರಣ ಮಾಧ್ಯಮದ ಆಧಾಯವೂ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಅಧ್ಯಯನಶೀಲರಾಗಿರಬೇಕು. ಜೀವನದಲ್ಲಿ ಅಧ್ಯಯನಶೀಲತೆಯನ್ನು ರೂಡಿಸಿಕೊಳ್ಳಬೇಕು. ಸುದ್ದಿ ಮಾಡುವ ಮುನ್ನ ಮರುಪರಿಶೀಲನೆ ಮಾಡಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.